ಕ್ರಿಸ್ಮಸ್ ಹಬ್ಬ- ಶಿಶುಗೀತೆ
ಕವನ
ಬನ್ನಿ, ಬನ್ನಿ ಮಕ್ಕಳೇ ಸಾಂತ ಬರುವನು
ಕ್ರಿಸ್ಮಸ್ ಹಬ್ಬದಲ್ಲಿ ಬಂದೇ ಬರುವನು
ಪುಟ್ಟ, ಪುಟ್ಟ ಮಕ್ಕಳಿಗೆ ಪ್ರೀತಿಯಲ್ಲಿ
ಉಡುಗೊರೆಯ ರಾಶಿ ಹೊತ್ತು ತರುವನು.
ದೇವದೂತ ಯೇಸುಕ್ರಿಸ್ತನ ಹುಟ್ಟು ಹಬ್ಬವು
ಮನೆಯ ಅಂಗಳದಲ್ಲಿ ನಕ್ಷತ್ರ ದೀಪವು
ಪ್ರಾರ್ಥನೆ, ಹಾಡು ಕ್ರೈಸ್ತ ಭಾಂದವರಲ್ಲಿ
ಸಂತಸ,ಸಂಭ್ರಮ ತಂದಿದೆ ಅವರಲ್ಲಿ.
ರುಚಿ,ರುಚಿಯ ತಿಂಡಿ,ತಿನಿಸುಗಳಲ್ಲಿ
ಮನೆ, ಮನೆಯ ತುಂಬಾ ರಾಶಿಯಲ್ಲಿ
ಕೇಕಿನ ಗೋಪುರದ ಬಗೆಯು ಕಣ್ಮನಕೂ
ಕ್ರಿಸ್ಮಸ್ ಮರದ ತುಂಬಾ ಮಿಂಚಿನ ಬೆಳಕು.
ಶುಭವ ಕೋರೋಣ ಸಹೋದರರಿಗೆ
ನಮನವನ್ನು ಸಲ್ಲಿಸೋಣ ಶಾಂತಿದೂತಗೆ
ಮಕ್ಕಳೇ ಬೆರೆಯಿರಿ, ಸಿಹಿಯ ತಿನ್ನಿರಿ
ಭೇದ ಭಾವ ಮರೆತು ನಕ್ಕು ನಲಿಯಿರಿ.
-ವೀಣಾ ಕೃಷ್ಣಮೂರ್ತಿ, ದಾವಣಗೆರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್