ಕ್ಷಣಗಳು - ಯುಗಗಳು
ಕವನ
ಅಂದೇಕೋ ಅವನಿಲ್ಲದ ಘಳಿಗೆಗಳು
ಯುಗಗಳಂತಾಗಿ, ನಿಟ್ಟುಸಿರುಗಳ ಹಾವಳಿಯಿಂದ ಬರಿದಾಗಿತ್ತು.
ಪ್ರೀತಿಯೋ, ಪ್ರೇಮವೋ, ಸ್ನೇಹವೋ ತಿಳಿಯದೆ ಬಲಿಹಾಕಿತ್ತು.
ಅವನೇಕೆ ’ನನಗೆ’?
’ಅವನೇ’ ಏಕೆ ನನಗೆ?
ಗುಂಪಲ್ಲಿ ಭಿನ್ನ? ನಿಲುವಲ್ಲಿ ಚೆನ್ನ?
ಮಾತಲ್ಲಿ ಮೌನ? ಮುಂದೆಲ್ಲ ಗೌಣ...!
’ಪ್ರೀತಿಯೇ?’ - ಅಳುಕೊಂದೆಡೆ,
ಆಕರ್ಷಣೆಯ ಥಳುಕೊಂದೆಡೆ,
ಅವನ ಮಾತುಗಳು ಸಭ್ಯ, ನಡವಳಿಕೆ ಸಭ್ಯ,
ನೋಟವೇ ಎದೆಯಿರಿದದ್ದು, ಎಂಥ ಭಾಗ್ಯ!!
ಇವ ಮತ್ತೆರಡು ಹೆಣ್ಜೋಡಿ ಕಣ್ಗಳಿಗೆ ಆಹಾರವಾದೊಡೆ
ಮನ ತವಕಿಸಿದ್ದು ಇವನನ್ನೇ!
ಇಂದು ಅಗ್ನಿಸಾಕ್ಷಿಯಾಗಿ ಕೈ ಹಿಡಿದ ಈ ನನ್ನವ
’ನನ್ನವ’ನಾಗಲು ಕ್ಷಣಗಳೇಕೆ ಯುಗಗಳು?
ದುಂಬಿಯ ಕಾಯುವ ಹೂವಿನಂತೆ ನಾನು,
ಪರಾಗಸ್ಪರ್ಶವನೀಯುವ ಅವನು!
ಮಿಲನವಾದಾಗ ಕ್ಷಣಗಳೂ ಕ್ಷಣಿಕಗಳೇ!!
Comments
ಉ: ಕ್ಷಣಗಳು - ಯುಗಗಳು
In reply to ಉ: ಕ್ಷಣಗಳು - ಯುಗಗಳು by ಭಾಗ್ವತ
ಉ: ಕ್ಷಣಗಳು - ಯುಗಗಳು