ಕ0ದಾ......

ಕ0ದಾ......

ಕವನ

 ಕ೦ದಾ.....

ನನ್ನನ್ನು ಕ್ಶಮಿಸಿ ಬಿಡು..

 

ಕಣ್ತೆರೆಯುವ ಮೊದಲೇ

ಕತ್ತಲೆಯ ನೀಡಿರುವೆ

ಕರುಣೆಯೂ ತೋರದೆ

ನಿನ್ನನ್ನು ತೊರೆದಿರುವೆ.....

 

ಕಾಣದ ಕೈಗಳ ತಪ್ಪಿಗೆ

ನೀನು ಬಲಿಯಾದೆ

ತಾಯಿಯ ಪ್ರೀತಿಯ ಅಪ್ಪುಗೆ

ಸಿಗದೆ ತಬ್ಬಲಿಯಾದೆ....

 

ನಿನ್ನ ಅಗಲಿಕೆಯಲ್ಲಿ

ನನ್ನ ಭವಿಶ್ಯವಿದೆ

ನೀನಿರದ ಬದುಕಿನಲ್ಲಿ

ನನಗೆ ಬೆಲೆಯಿದೆ......

 

ಕಪಟ ತಿಳಿಯದ

ನಿನ್ನ ಕತ್ತಲ ಹಾದಿಯಲ್ಲಿ

ಬಿಟ್ಟು ನನ್ನ ಒಳಿತಿಗಾಗಿ

ಮತ್ತೊಬ್ಬ ಕು೦ತಿಯಾದೆ.......

 

 

Comments