ಖಗೋಳಶಾಸ್ತ್ರದ ಆಧುನಿಕತೆಯ ದಾರಿದೀಪ! (ಭಾಗ ೧)
ಸಹಸ್ರಮಾನದ ಸುಯುಗದಲ್ಲಿ ಅಗಣಿತ ಕೊಡುಗೆಗಳು ಇದ್ದವು; ಕೆಲವುಗಳನ್ನು ಆಯ್ಕಿಸುವುದು ಅಸಾಧ್ಯಕರವಾದದ್ದು- ಜಮೀಲ್ ರಾಗೆಬ್
ಖಗೋಳಶಾಸ್ತ್ರವು ಪ್ರಪಂಚದ ಅತ್ಯಂತ ಹಳೆಯ ನೈಸರ್ಗಿಕ ವಿಜ್ಞಾನವಾಗಿರುವುದರಲ್ಲಿ ಸಂದೇಹವಿಲ್ಲ. ಬುದ್ಧಿಜೀವಿಗಳು ಬಾಹ್ಯಾಕಾಶವನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡುವ ಮೊದಲು, ನಾವು ನಮ್ಮ ತಲೆಯನ್ನು ಮೇಲಕ್ಕೆತ್ತಿ ಗಗನಾದ್ಯಂತ ಹರಡಿದ ಪ್ರಕಾಶಮಾನವಾದ ಬೆಳಕಿನ ದಿವ್ಯ ಬಿಂದುಗಳನ್ನು ಉತ್ಸುಕ್ತರಾಗಿ - ಅವುಗಳ ಚಲನೆಗಳನ್ನು ಮತ್ತು ನಿಶ್ಚಲತೆಯನ್ನು - ನೋಡಿ ಆನಂದಿಸಿದ್ದೆವು. ಪ್ರಪಂಚದಾದ್ಯಂತದ ನಾಗರಿಕತೆಗಳು ತಮ್ಮ ವಾಸ್ತುಶೈಲಿಯಿಂದ ತಮ್ಮ ಐತಿಹ್ಯಕಥೆ ಹೇಳುವವರೆಗೆ ಎಲ್ಲದರಲ್ಲೂ ಖಗೋಳ ಅವಲೋಕನಗಳನ್ನು ಅಳವಡಿಸಿಕೊಂಡಿತ್ತು ಮತ್ತು ವಿಜ್ಞಾನದ ಉತ್ತುಂಗವು ನವೋದಯ ಕಾಲದಲ್ಲಿ ಹುಟ್ಟಿಕೊಂಡಿತು ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ; ಇದು ವಾಸ್ತವವಾಗಿ ಸಾವಿರ ವರ್ಷಗಳ ಹಿಂದೆ ಮಧ್ಯಪ್ರಾಚ್ಯದಲ್ಲಿ ಪ್ರಾರಂಭವಾಗಿ ಆಧುನಿಕ ರೂಪ ಧರಿಸತೊಡಗಿತು.
ಸರಿಸುಮಾರು 6ನೇ ಶತಮಾನ A.Dಯಲ್ಲಿ, ಯುರೋಪ್ ಖಂಡವು 'Dark Age' ಎಂದು ಕರೆಯಲ್ಪಡುವ ಕಾಲವನ್ನು ಎದುರಿಸಿತು. ಸುಮಾರು 500 A.D ಯಿಂದ 13ನೇ ಶತಮಾನದವರೆಗಿನ ಈ ಅವಧಿಯು ಖಂಡದಾದ್ಯಂತ ಪ್ರಾಜ್ಞ ಚಿಂತನೆ ಮತ್ತು ಪಾಂಡಿತ್ಯದ ನಿಗ್ರಹಕ್ಕೆ ಸಾಕ್ಷಿಯಾಯಿತು. ಕಾರಣ, ಇದು ಚರ್ಚ್‌ನ ಧಾರ್ಮಿಕ ದೃಷ್ಟಿಕೋನಗಳಿಗೆ ತದ್ವಿರುದ್ಧವಾಗಿ ಕಂಡುಬಂದಿತು. ಈ ಸಮಯದಲ್ಲಿ ಲಿಖಿತ ಪದವು ವಿರಳವಾಗಿತ್ತು. ಅಲ್ಲದೆ, ಸಂಶೋಧನೆಗಳು ಮತ್ತು ಅವಲೋಕನಗಳು ನಿಷ್ಕ್ರಿಯಗೊಂಡವು.
ಯುರೋಪ್ ಬೌದ್ಧಿಕ-ಪ್ರಾಜ್ಞ ಕೋಮಾದಲ್ಲಿದ್ದಾಗ, ಮೂರಿಶ್ ಸ್ಪೇನ್‌ನಿಂದ ಈಜಿಪ್ಟ್ ಮತ್ತು ಚೀನಾದವರೆಗೆ ವಿಸ್ತರಿಸಿದ 'ಇಸ್ಲಾಮಿಕ್ ಸಾಮ್ರಾಜ್ಯ'ವು ಇಸ್ಲಾಮಿನ "ಸುವರ್ಣಯುಗ" ವನ್ನು ಪ್ರವೇಶಿಸುತ್ತಿತ್ತು. ಖಗೋಳಶಾಸ್ತ್ರದಲ್ಲಿ ಇರಾನ್ ಮತ್ತು ಇರಾಕ್‌ನಲ್ಲಿನ ಇಸ್ಲಾಮಿಕ್ ವಿದ್ವಾಂಸರು ಮೆಚ್ಚಿದರು. ಆ ಕಾಲ ಸುಮಾರು 800 A.D ವರೆಗೆ - ಗ್ರೀಸ್‌ನಲ್ಲಿ ಸುಮಾರು 100 A.D ತನಕ ರಚಿಸಲಾಗಿದ್ದ ಟಾಲೆಮಿಯ ಅಲ್ಮಾಜೆಸ್ಟ್ 'Almagest' ಏಕೈಕ ಖಗೋಳಶಾಸ್ತ್ರದ ಗ್ರಂಥವಾಗಿತ್ತು. ಈ ಗೌರವಾನ್ವಿತ ಪಠ್ಯವನ್ನು ಇಂದಿಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾಚೀನ ಖಗೋಳಶಾಸ್ತ್ರದ ಮುಖ್ಯ ಉಲ್ಲೇಖವಾಗಿ ಬಳಸಲಾಗುತ್ತದೆ. ಈ ಮೂಲಧಾರ ಗ್ರೀಕ್ ಪಠ್ಯವನ್ನು ಅರೇಬಿಕ್ ಭಾಷೆಗೆ ಭಾಷಾಂತರಿಸಲು ಮುಸ್ಲಿಂ ವಿದ್ವಾಂಸರು 700 ವರ್ಷಗಳ ಕಾಲ ದುಡಿದು, ಅದರ ಕರ್ತೃಪದ ವಿಷಯಗಳನ್ನು ಅರ್ಥೈಸಿಕೊಳ್ಳಲು ಕೆಲಸ ಮಾಡಿದರು.
ಈಜಿಪ್ಟ್‌ನ ಇಬ್ನ್ ಯೂನಸ್ ಮಿಸ್ರಿ (Ibn Yunus Misri)ನಂತಹ ಖಗೋಳಶಾಸ್ತ್ರಜ್ಞರು ಗ್ರಹಗಳ ಚಲನೆ ಮತ್ತು ಅವುಗಳ ವಿಕೇಂದ್ರೀಯತೆಗಳ ಕುರಿತು ಟಾಲೆಮಿಯ ಲೆಕ್ಕಾಚಾರದಲ್ಲಿ ಬಹಳಷ್ಟು ವೈಜ್ಞಾನಿಕ ದೋಷಗಳನ್ನು ಕಂಡುಹಿಡಿದು ಸರಿಪಡಿಸಲು ಸಫಲ ಯತ್ನಪಟ್ಟರು. ಈ ನಿಯತಾಂಕಗಳಲ್ಲಿ ಭೂಮಿಯು ಹೇಗೆ ಚಲಿಸುತ್ತದೆ ಎಂಬುದನ್ನೂ ಒಳಗೊಂಡಂತೆ ಈ ಕಾಯಗಳು ಆಕಾಶದಲ್ಲಿ ಹೇಗೆ ಸುತ್ತುತ್ತವೆ ಎಂಬುದಕ್ಕೆ ವಿವರಣೆಯನ್ನು ಕಂಡುಹಿಡಿಯಲು ಟಾಲೆಮಿ ಪ್ರಯತ್ನಿಸಿದ್ದನು. ಭೂಮಿಯ ಕಂಪನ ಅಥವಾ ನಾವು ಈಗ ತಿಳಿದಿರುವಂತೆ ಪೂರ್ವಭಾವಿ ಪ್ರತಿ 100 ವರ್ಷಗಳಿಗೊಮ್ಮೆ 1 ಡಿಗ್ರಿ ಬದಲಾಗುತ್ತದೆ ಎಂದು ಟಾಲೆಮಿ ಲೆಕ್ಕಾಚಾರ ಮಾಡಿದ್ದರು.
ತದನಂತರ, ಖಗೋಳಶಾಸ್ತ್ರಜ್ಞ ಇಬ್ನ್ ಯೂನಸ್ ಮಿಸ್ರಿ ಅವರು, ಪ್ಟೋಲೆಮಿಯ ಬಹಳಷ್ಟು ತಪ್ಪುಗಳನ್ನು ತಿದ್ದುಪಡಿಸಿದರು; ಆಧುನಿಕ ಖಗೋಳಶಾಸ್ತ್ರ ಒಪ್ಪಿಕೊಂಡಂತೆ - ಪ್ರಥ್ವಿಯೂ ಪ್ರತಿ 70 ವರ್ಷಗಳಿಗೊಮ್ಮೆ 1 ಡಿಗ್ರಿ ಬದಲಾಗುತ್ತಿದೆ - ಎಂಬ ಜ್ಞಾನವನ್ನು ಸರಿಪಡಿಸಿದವರು ಇಬ್ನ್ ಯೂನಸ್ ಮಿಸ್ರಿ! ಆದಾಗ್ಯೂ, ಭೂಮಿಯ ಕಂಪನವು ಈ ಬದಲಾವಣೆಯನ್ನು ಉಂಟುಮಾಡುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ ಏಕೆಂದರೆ 10 ನೇ ಶತಮಾನದಲ್ಲಿ ಭೂಮಿಯು ಬ್ರಹ್ಮಾಂಡದ ಕೇಂದ್ರದಲ್ಲಿದೆ ಎಂದು ನಂಬಲಾಗಿತ್ತು. ಇಬ್ನ್ ಯೂನಸ್ ಮತ್ತು ಇಬ್ನ್ ಅಲ್-ಶತೀರ್ ಅವರಂತಹ ಇತರರ ಈ ಆವಿಷ್ಕಾರವು ಖಗೋಳಶಾಸ್ತ್ರದ ಮೂಲಾಧಾರವನ್ನೇ ಶಾಶ್ವತವಾಗಿ ಬದಲಾಯಿಸಿತು.
16 ನೇ ಶತಮಾನದಲ್ಲಿ ಕೋಪರ್ನಿಕಸ್ ಪ್ರಸ್ತಾಪಿಸಿದ ಸೂರ್ಯಕೇಂದ್ರಿತ ಮಾದರಿಯನ್ನು ಈ ಕೃತಿಯ ಮೇಲೆ ನಿರ್ಮಿಸಲಾಗಿತ್ತು. ಖಗೋಳಶಾಸ್ತ್ರಕ್ಕೆ ಅಗತ್ಯವಾಗಿದ್ದ ಗಣಿತವು ಇಸ್ಲಾಮಿಕ್ ವಿದ್ವಾಂಸರು ಅನಂತ ಕೊಡುಗೆ ನೀಡಿ ವೈಜ್ಞಾನಿಕ ಸೇವೆ ಸಲ್ಲಿಸಿದ್ದಾರೆ. ಅವರು ಗೋಳಾಕಾರದ ತ್ರಿಕೋನಮಿತಿ ಮತ್ತು ಬೀಜಗಣಿತವನ್ನು ಅಭಿವೃದ್ಧಿಪಡಿಸಿದರು; ನಕ್ಷತ್ರಗಳ ನಿಖರವಾದ ಲೆಕ್ಕಾಚಾರಗಳಿಗೆ ಗಣಿತದ ಎರಡು ಮೂಲರೂಪಗಳನ್ನು ವೃದ್ಧಿಸಿದರು.
ಮೆಕ್‌ಗಿಲ್ ವಿವಿಯ [McGill University] ಇಸ್ಲಾಮಿಕ್ ಅಧ್ಯಯನಗಳ ಪ್ರಾಧ್ಯಾಪಕ ಜಮಿಲ್ ರಾಗೆಪ್ ಅವರು, "ಸಹಸ್ರಮಾನದ ಸುಯುಗದಲ್ಲಿ ಅಗಣಿತ ಕೊಡುಗೆಗಳು ಇದ್ದವು; ಕೆಲವುಗಳನ್ನು ಆಯ್ಕಿಸುವುದು ಅಸಾಧ್ಯಕರವಾದದ್ದು" ಎಂದು ಹೇಳುತ್ತಾರೆ.
ಮುಂದಿನ ಲೇಖನದಲ್ಲಿ ಖಲೀಫಾ ಅಲ್-ಮಾಮೂನ್ ಅಲ್-ರಶೀದ್ ಅವರ ಸದಾಡಳಿತದಲ್ಲಿ ವೃದ್ಧಿಗೊಂಡ ವಿಜ್ಞಾನ ಮತ್ತು ಖಗೋಳಶಾಸ್ತ್ರಗಳ ಕುರಿತು ಬಹಳಷ್ಟು ಕುತೂಹಲಕಾರಿ ವಿಷಯಗಳು ಮುಂದಿನ ಲೇಖನದಲ್ಲಿ ಮಂಡಿಸಲಾಗುವುದು.
-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ