ಖಗೋಳಶಾಸ್ತ್ರದ ಆಧುನಿಕತೆಯ ದಾರಿದೀಪ! (ಭಾಗ ೨)

ಖಗೋಳಶಾಸ್ತ್ರದ ಆಧುನಿಕತೆಯ ದಾರಿದೀಪ! (ಭಾಗ ೨)

ಖಲೀಫ ಮಾಮುನ್ ಅಲ್-ರಶೀದ್ ಅವರ ಆಳ್ವಿಕೆಯಡಿಯಲ್ಲಿ ಮೊದಲ ಖಗೋಳಸಮೀಕ್ಷಾಮಂದಿರವನ್ನು 8ನೇ ಶತಮಾನದಲ್ಲಿ ಬಾಗ್ದಾದ್‌ನಲ್ಲಿ ನಿರ್ಮಿಸಲಾಗಿತ್ತು. ತದನಂತರ, ಅದನ್ನು ಅನುಸರಿಸಿ ಬಹಳಷ್ಟು ಖಗೋಳಣ ಸಮೀಕ್ಷಾ ಮಂದಿರಗಳನ್ನು ಇರಾಕ್ ಮತ್ತು ಇರಾನಲ್ಲಿ ನಿರ್ಮಿಸಲಾಯಿತು. ಖಲೀಫರ ಸುಖಿರಾಜ್ಯದಲ್ಲಿ ಅವರ ಸದಾಡಳಿತದ ನೆರಳಿನಲ್ಲಿ ಅನಂತ ವೈಜ್ಞಾನಿಕ ಪರಿಷ್ಕರಣಗಳು ಸುಖಪ್ರದವಾಗಿ ನೆರವೇರಿಸಿಲಾಯಿತು. ಆಧುನಿಕ ದೂರದರ್ಶಕವನ್ನು ಅಭಿವೃದ್ಧಿಪಡಿಸುವ ಪೂರ್ವ, ಆ ಕಾಲದ ಖಗೋಳಶಾಸ್ತ್ರಜ್ಞರು ವೀಕ್ಷಣಾ ಕೋನಗಳನ್ನು ಕಂಡುಹಿಡಿದರು. 40 ಮೀಟರ್‌ಗಳಷ್ಟು ದೊಡ್ಡದಾಗಿದ್ದ ಈ ಉಪಕರಣಗಳು ಸೂರ್ಯನ ಗೋಟು, ನಕ್ಷತ್ರಗಳ ಚಲನೆ ಮತ್ತು ಪರಿಭ್ರಮಿಸುವ ಗ್ರಹಗಳ ತಿಳುವಳಿಕೆಯ ಕುರಿತು ಸಂಶೋಧಿಸಲು ಮತ್ತು ಅಧ್ಯಯನಿಸಲು ಉಪಯುಕ್ತಕರವಾಗಿತ್ತು.

964ರ ಸುತ್ತ ಅಗಣಿತ ಅವಲೋಕನಗಳು ನಡೆದ ಬಳಿಕ, ಇರಾನ್‌ನ ಸುಪ್ರಸಿದ್ಧ ಖಗೋಳಶಾಸ್ತ್ರಜ್ಞರಾದ ಅಬ್ದ್ ಅಲ್-ರಹಮಾನ್ ಅಲ್-ಸೂಫಿ ಅವರು 'ದಿ ಬುಕ್ ಆಫ್ ಫಿಕ್ಸೆಡ್ ಸ್ಟಾರ್ಸ್'ಅನ್ನು ಪ್ರಕಟಿಸಿದರು; ಇದು ಅಂತರೀಕ್ಷದಲ್ಲಿರುವ ನಕ್ಷತ್ರಪುಂಜಗಳ ಕುರಿತು ರಚಿಸಲಾಗಿದ್ದ ಅತ್ಯಂತ ಸಮಗ್ರ ಮೇರುಕೃತಿಗಳಲ್ಲಿ ಒಂದಾಗಿದೆ. ಅಬ್ದ್ ಅಲ್-ರಹಮಾನ್ ಅಲ್-ಸೂಫಿ ಆಂಡ್ರೊಮಿಡಾ (Andromeda) ನಕ್ಷತ್ರಪುಂಜ ಮತ್ತು Giant Magellanic Cloudಅನ್ನು ನೋಡಿದ ಮೊತ್ತಮೊದಲ ಖಗೋಳಶಾಸ್ತ್ರಜ್ಞ ಎಂಬ ಹೆಗ್ಗಳಿಕೆಗೆ ಪಾತ್ರರಾದವರು! ದೂರದರ್ಶಕವನ್ನು ಶೋಧಿಸಲಾಗದ ಕಾರಣ ಈ ವೀಕ್ಷಣೆಗಳನ್ನು ಬರಿಗಣ್ಣಿನಿಂದ ಸಂಪೂರ್ಣವಾಗಿ ಮಾಡಲಾಗುತ್ತಿತ್ತು. ಆ ಕಾಲದಲ್ಲಿ ಅದು ತಾರಾಗಣ ಎಂದು ಅವರಿಗೆ ತಿಳಿಯದಿರುವುದರಿಂದ ಅವರು ಅದನ್ನು ತಮ್ಮ ಕೃತಿಯಲ್ಲಿ ಅದನ್ನು "ಮೋಡ" ಎಂದು ಉಲ್ಲೇಖಿಸಿದರು. ಈ ಕೊಡುಗೆ ಪ್ರಸಿದ್ಧ ಡ್ಯಾನಿಶ್ ಖಗೋಳಶಾಸ್ತ್ರಜ್ಞ 'ಟೈಕೋ ಬ್ರಾಹೆ'ಗೆ ಬಹಳ ಉಪಯುಕ್ತವಾಗಿತು ಎಂದು ವಿಶ್ವಕೋಶಗಳಲ್ಲಿ ಪುರಾವೆಗಳೊಂದಿಗೆ ವಿವರಿಸಲಾಗಿದೆ.

13ನೇ ಶತಮಾನದಲ್ಲಿ, ವಿಜ್ಞಾನಿ ಮತ್ತು ತತ್ವಜ್ಞಾನಿ- ನಾಸಿರ್ ಅಲ್-ದಿನ್ ಅಲ್-ತುಸಿ ಪ್ರಸಿದ್ಧ Tusi-Coupleಯನ್ನು ರಚಿಸಿದರು. UC Berkeleyಯಲ್ಲಿ ಇಸ್ಲಾಮಿಕ್ ಅಧ್ಯಯನಗಳು ಮತ್ತು ವಿಜ್ಞಾನದ ಇತಿಹಾಸದ ಉಪನ್ಯಾಸಕರಾದ ಅಸದ್ ಅಹ್ಮದ್ ವಿವರಿಸುತ್ತಾರೆ, "ಈ Coupleಗಳ ಉದ್ದೇಶವು ವೃತ್ತಾಕಾರದ ಚಲನೆಯ ಆಧಾರದ ಮೇಲೆ ಕೆಲವು ಆಕಾಶಕಾಯಗಳ ಸ್ಪಷ್ಟ ರೇಖಾತ್ಮಕ ಚಲನೆಯನ್ನು ವಿವರಿಸುವುದಾಗಿದೆ". ನಮಗೀಗ ತಿಳಿದಿರುವಂತೆ, ಸ್ವರ್ಗೀಯ ಚಲನೆಗಳು ಸ್ಥಿರವಾಗದೆ ನಿರಂತರವಾಗಿರುತ್ತವೆ- ಈ ವಿದ್ಯೆಯನ್ನು ವಿವರಿಸುವಲ್ಲಿ ಟಾಲೆಮಿಗೆ ಬಹಳ ತೊಂದರೆಯಾಯಿತು; Tusi Coupleಗಳು ಒಂದು ದೊಡ್ಡ ವೃತ್ತದೊಳಗೆ ಸಣ್ಣ ವೃತ್ತವನ್ನು ಇರಿಸುವ ಮೂಲಕ ರೇಖಾತ್ಮಕ ಚಲನೆಯನ್ನು ಎತ್ತಿತೋರಿಸಲು ಸಾಧ್ಯವಾಯಿತು.

'Tusi Couple' ನಂತರ ಕೋಪರ್ನಿಕಸ್ ಅವರ ಸಂಶೋಧನೆಯ ಕಾಲದಲ್ಲಿ ಈ ಚಲನೆಗಳ ತಿಳುವಳಿಕೆಗೆ ಬಹಳ ಉಪಯುಕ್ತಕರವಾಗಿತ್ತು. ಇಸ್ಲಾಂನ ಸುಪ್ರಸಿದ್ಧ ಖಗೋಳಶಾಸ್ತ್ರಜ್ಞರು ಮತ್ತು ವೈಜ್ಞಾನಿಕ ಚಿಂತಕರಲ್ಲಿ ಒಬ್ಬರಾದ ಇಬ್ನ್ ಅಲ್-ಹೈಥಮ್ ಅವರನ್ನು "ದೃಗ್ವಿಜ್ಞಾನದ ಪಿತಾಮಹ" ಎಂದು ಕರೆಯಲಾಗುತ್ತದೆ; ಕಾರಣ, ನಾವು ಬೆಳಕನ್ನು ಹೇಗೆ ಗ್ರಹಿಸುತ್ತೇವೆ ಎಂಬುದರ ಕುರಿತು 'Code'ಅನ್ನು ಭೇದಿಸಿದ ಪ್ರಥಮ ವಿಜ್ಞಾನಿ. ಬೆಳಕು ನಮ್ಮ ಕಣ್ಣುಗಳಿಗೆ ನೇರ ರೇಖೆಯಲ್ಲಿ ಚಲಿಸುತ್ತದೆ ಎಂದು ಅವರು ಕಂಡು ಹಿಡಿದರು. ನೂರಾರು ವರ್ಷಗಳಿಂದ - ನಮ್ಮ ಕಣ್ಣುಗಳು - ಬ್ಯಾಟರಿಯಂತೆ ಬೆಳಕನ್ನು ಹೊರಸೂಸುತ್ತವೆ ಎಂದು ಟಾಲೆಮಿಯಂತಹ ಜ್ಞಾನಿಗಳು ತಪ್ಪಾಗಿ ಭಾವಿಸಿದ್ದರು. ಇಬ್ನ್ ಅಲ್-ಹೈಥಮ್ ಅವರ ಶೋಧನೆಗಳು  'camera obscura'ವನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಕಟ್ಟಕಡೆಗೆ ದೂರದರ್ಶಕದ ಅಭಿವೃದ್ಧಿಯಲ್ಲಿ ಬಹಳ ನೆರವಾಯಿತು.

-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ