ಖಡಾ ಪಾರ್ಸಿ ವಿಗ್ರಹದ ಎತ್ತಂಗಡಿ ಏಕೆ ?
"ಖಡಾ ಪಾರ್ಸಿ ", ಶ್ರೀ ಮಾನೊಕ್ ಜಿ ರವರ ಒಂದು ಕಂಚಿನ ವಿಗ್ರಹ. ಸುಮಾರು ಒಂದು ಶತಮಾನದಿಂದ ಬಿಸಿಲು, ಮಳೆ ಗಾಳಿಯೆನ್ನದೆ ನಿಂತೇ ಇದೆ. ಆಗ ಭೈಕಲ್ಲಾ ಕ್ಷೇತ್ರದ ಆವರಣದ ಮಧ್ಯೆ ನಿಂತಿತ್ತು. ಮುಂಬೈ ನ ಅಗಾಧ ಬೆಳವಣಿಗೆಯಿಂದ, ಮೊದಲೇ ಚುಟುಕು ಜಾಗವಿರುವ ಕಡೆ, ಪ್ಲೈಓವರ್ ಕಟ್ಟಿದಾರೆ. ರಸ್ತೆಗಳಲ್ಲಿ ವಾಹನಗಳ ಓಡಾಟ ನೂರ್ಪಟ್ಟಾಗಿದೆ. ಹಾಗಾಗಿ, ಖಡಾ ಪಾರ್ಸಿಯವರ ಬಗ್ಗೆ ಕೇಳುವವರ್ಯಾರು ?
ಮುಂಬೈ ನ ಬೆಳವಣಿಗೆಗೆ, ಪೊರ್ಚುಗೀಸರು, ಇಂಗ್ಲೀಷರ ಕೊಡುಗೆ ಅನನ್ಯ. ನಂತರ ಅಗ್ರಸ್ಥಾನದಲ್ಲಿ ನಿಲ್ಲುವವರು, ಪಾರ್ಸಿಗಳು, ಮಾರ್ವಾಡಿಗಳು, ಇತ್ಯಾದಿ ಸಮುದಾಯಗಳು. ಇದರಲ್ಲಿ ಎರಡು ಅಭಿಪ್ರಾಯಗಳಿಲ್ಲ. ಟಾಟಾ ಸಂಸ್ಥೆಯ ಉಪಕಾರವನ್ನು ಪ್ರತಿ ಭಾರತೀಯನೂ ಹೆಮ್ಮೆಯಿಂದ ನೆನೆಯುವಂತಹದು. ಮಾನೊಕ್ ಜಿ ರವರು, ಒಬ್ಬ ಪ್ರತಿಷ್ಥಿತ ಪಾರ್ಸಿ ಸಮುದಾಯದ ವ್ಯಕ್ತಿ. ಶಾಲೆ, ಕಾಲೇಜ್ ಗಳಿಗೆ ಧನ ಸಹಾಯ ಮಾಡಿದ್ದಾರೆ. ಅವರ ಬಗ್ಗೆ ಈಗೆನ ಪೀಳಿಗೆಗೆ ತಿಳಿಹೇಳವ ಬದಲಿಗೆ , ಬಿ. ಎಮ್. ಸಿ ಯವರು ತಲೆಯಿಲ್ಲದೆ, ಮಾನೊಕ್ ಜಿ ರವರ ವಿಗ್ರಹವನ್ನು ಎತ್ತಿ ಪಾರ್ಸಿ ಉದ್ಯಾನವನಕ್ಕೆ ಸಾಗಿಸುವ ಯೋಜನೆ ಹಾಕಿಕೊಂಡು ಎಲ್ಲರ ಮನಸ್ಸಿಗೆ ನೊವನ್ನುಂಟುಮಾಡಿದ್ದಾರೆ. ಸುಂದರ ಪಾರ್ಸಿ ಉದ್ಯಾನಕ್ಕೆ, ಹಣದ ಕೊರತೆಯಿದೆ. ಅದನ್ನು ನೀಗಲು ಸಹಾಯಮಾಡುವುದನ್ನು ಬಿಟ್ಟು, ಏನೇನೋ ತಲೆಯಿಲ್ಲದ ಕೆಲಸವನ್ನು ತಮ್ಮ ಮನಸ್ಸಿಗೆ ಬಂದಂತೆ, ಮಾಡುತ್ತಿದ್ದಾರೆ. ಹಣ ಲಪಟಾಯಿಸುವುದೊಂದೇ ಅವರ ಧ್ಯೇಯವಾಗಿರುವಂತಿದೆ !
ಮುಂಬೈ ನ ವಿಶಾಲ ಜನ ಸಮುದಾಯಗಳೆಲ್ಲದರ ಕೊಡುಗೆಯನ್ನು ಆದರಿಸಿ, ಗೌವರಿಸುವ ಸದ್ಬುದ್ಧಿಯನ್ನು ಕೊಡಲೆಂದು ದೇವರಲ್ಲಿ ಪ್ರಾರ್ಥಿಸುವುದೊಂದು ಬಿಟ್ಟರೆ ಬೇರೆಯೇನೂ ತೋರುತ್ತಿಲ್ಲ !