ಖರ್ಜೂರ ಉಂಡೆ
ಬೇಕಿರುವ ಸಾಮಗ್ರಿ
ಸಣ್ಣಗೆ ಹೆಚ್ಚಿದ ಖರ್ಜೂರ ೨ ಕಪ್, ಗೋಡಂಬಿ ತುಂಡು ೧/೨ ಕಪ್, ಒಣ ಕೊಬ್ಬರಿ ತುರಿ ೧/೨ ಕಪ್, ಬಾದಾಮಿ ತುಂಡು ೧/೨ ಕಪ್, ಸಕ್ಕರೆ ಪುಡಿ ೧/೨ ಕಪ್, ತುಪ್ಪ ೧/೪ ಕಪ್, ಏಲಕ್ಕಿ ಪುಡಿ ೧ ಚಮಚ.
ತಯಾರಿಸುವ ವಿಧಾನ
ಸಣ್ಣಗೆ ಹೆಚ್ಚಿದ ಖರ್ಜೂರ, ಗೋಡಂಬಿ ತುಂಡು, ಬಾದಾಮಿ ತುಂಡುಗಳನ್ನು ಬೇರೆ ಬೇರೆಯಾಗಿ ಸ್ವಲ್ಪ ತುಪ್ಪದಲ್ಲಿ ಹುರಿದು ಒಣ ಕೊಬ್ಬರಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ ಸಕ್ಕರೆ ಹಾಕಿ ಕದಡಿ ನಂತರ ಮಿಶ್ರಣ ಮಾಡಿರಿಸಿದ ಸಾಮಗ್ರಿ ಸೇರಿಸಿ ತಿರುವಿ ಒಲೆಯಿಂದ ಕೆಳಗಿರಿಸಿ ಉಂಡೆ ಕಟ್ಟಿ. ಇದು ಬಹಳ ಪೌಷ್ಟಿಕಾಂಶಗಳಿಂದ ಕೂಡಿದ ಉಂಡೆ. ಚಿಕ್ಕ ಮಕ್ಕಳು ಇಷ್ಟ ಪಟ್ಟು ತಿನ್ನುತ್ತಾರೆ.
- ಸಹನಾ ಕಾಂತಬೈಲು, ಮಡಿಕೇರಿ