ಖರ್ಜೂರ ಪಾಯಸ

ಖರ್ಜೂರ ಪಾಯಸ

ಬೇಕಿರುವ ಸಾಮಗ್ರಿ

ಖರ್ಜೂರ ೨೦-೨೫, ತುಪ್ಪ ೨ ಚಮಚ, ತೆಂಗಿನಕಾಯಿ ಹಾಲು ಅರ್ಧ ಲೀಟರ್, ಬೆಲ್ಲದ ಹುಡಿ ೨ ಕಪ್, ಏಲಕ್ಕಿ, ಗೋಡಂಬಿ ಚೂರುಗಳು.

ತಯಾರಿಸುವ ವಿಧಾನ

ಸ್ವಚ್ಛ ಗೊಳಿಸಿ, ಬೀಜಗಳನ್ನು ತೆಗೆದ ಖರ್ಜೂರಗಳನ್ನು, ಮಿಕ್ಸಿಯಲ್ಲಿ ನಯವಾಗಿ ರುಬ್ಬಿ, ಬಾಣಲೆಗೆ ಹಾಕಿ, ತುಪ್ಪ ಸೇರಿಸಿ ಚೆನ್ನಾಗಿ ಹುರಿಯಬೇಕು. ತೆಂಗಿನಕಾಯಿ ರುಬ್ಬಿ ಹಾಲು ಹಿಂಡಿ ಇಟ್ಟುಕೊಂಡಿರಬೇಕು. ಸಾಧಾರಣ ಫ್ರ್ಯೆ ಆಗುವಾಗ (ಹಸಿ ಪರಿಮಳ ಹೋಗುವಲ್ಲಿವರೆಗೆ) ಎರಡನೇ ಸಲ ಹಿಂಡಿ ತೆಗೆದ ತೆಂಗಿನಕಾಯಿ ಹಾಲನ್ನು ಸೇರಿಸಿ, ಹುಡಿ ಮಾಡಿದ ಬೆಲ್ಲ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.(ಖರ್ಜೂರ ಪಾಯಸಕ್ಕೆ ಬೆಲ್ಲ ಸ್ವಲ್ಪ ಜಾಸ್ತಿ ಹಾಕಬೇಕು) ಬೆಲ್ಲ ಕರಗಿದ ಮೇಲೆ, ಹುಡಿ ಮಾಡಿದ ಏಲಕ್ಕಿ ಹಾಕಿ, ಮೊದಲು ಹಿಂಡಿ ಇಟ್ಟ ತೆಂಗಿನಕಾಯಿ ಹಾಲನ್ನು ಸೇರಿಸಿ, ಸಣ್ಣ ಉರಿಯಲ್ಲಿ ಕುದಿಸಬೇಕು. ಹೆಚ್ಚು ಕುದಿಯಬಾರದು. ಕೆಳಗಿಳಿಸಿ ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಸೇರಿಸಿ, ಹತ್ತು ನಿಮಿಷ ಮುಚ್ಚಿಟ್ಟು, ನಂತರ ಬಳಸಬೇಕು. ತುಂಬಾ ರುಚಿಯಾದ ಖರ್ಜೂರ ಪಾಯಸ ರೆಡಿ.

ಹೆಚ್ಚು ಸಿಹಿ ಬೇಡದೆ ಇದ್ದಲ್ಲಿ ಬೆಲ್ಲ ಸ್ವಲ್ಪ ಅಳತೆಯಲ್ಲಿ ಕಡಿಮೆ ಮಾಡಬಹುದು. ಸಕ್ಕರೆ ಹಾಕಿ ಸಹ ಈ ಪಾಯಸ ಮಾಡಬಹುದು. ತುಪ್ಪದಲ್ಲಿ ಹುರಿಯದೆ, ಬೇಯಿಸಿ, ರುಬ್ಬಿ ಸಹ ಮಾಡುವುದಿದೆ.

-ರತ್ನಾ ಕೆ ಭಟ್, ತಲಂಜೇರಿ