ಖವ್ಹಾಲಿ ಮತ್ತು ಗಝಲ್
ಗಂಡು -- ಓ ಸಖಿಯೆ ನಿನ್ನ ಒಲವಿಗಾಗಿ ಹಂಬಲಿಸುತ್ತಿರುವೆ
ಬಳಿ ಬಂದು ಕೈಹಿಡಿದು ಪ್ರೀತಿ ಕೊಡಲಾರೆಯಾ ||ಪ||
ತೇಲಿ ಬಿಡೆ ತೇಲಿ ಬಿಡೆ ತೇಲಿ ಬಿಡೆ
ಒಲವಿನಲ್ಲಿ ನನ್ನನೆಂದು ತೇಲಿಬಿಡೆ
ಬಾಳ ದೋಣಿ ಜೀವದಲೆಲಿ ಸಾಗುತಿದೆ
ನೀನು ಬಂದು ನನಗೆಯಿಂದು ಮುತ್ತು ಕೊಡೆ || ತೇಲಿಬಿಡೆ||
ನಿನ್ನ ಬಂಧಿಯಿಂದು ಮೋಹಪಾಶದೊಳಗೆ
ಉಸಿರುನಿಂತ ವೇದನೆಯಲ್ಲಿ ನರಳುತಿಹೆ
ಕೈಯ ಬೆಸೆದು ಮೈಯ ತಬ್ಬು ನನ್ನೊಲವೆ
ಬದುಕಿಯಿರುವೆ ಒಂದು ಕ್ಷಣ ನಿನ್ನಯೆದುರೆ ||ತೇಲಿಬಿಡೆ||
ರಾತ್ರಿಯಾಗೆ ಹಾಲ್ ಬೆಳಕೂ ಚುಚ್ಚುತಿಹುದೆ
ಹೃದಯ ಬೇನೆಯಲ್ಲಿಯೇ ಅಳುತಿಹುದೆ
ಸಹಿಸಲಾರೆ ಸಂಕಟವನ್ನು ಬದುಕಿನೊಳಗೆ
ಬಂದು ಸೇರು ನನ್ನನೊಮ್ಮೆ ಅರೆಗಳಿಗೆ ||ತೇಲಿಬಿಡೆ||
ಹೆಣ್ಣು -- ನಾ ಹೇಳಿದಂತೇ ನೀ ಇರುವಿಯಾದರೆ
ನಿನ್ನ ಆಸೆಯನ್ನು ಈಡೇರಿಸುವೆ ಸಖನೆ || ಪ ||
***
ಗಝಲ್
ಇದುವೆ ರಾಗ ಅದುವೆ ತಾಳ ನಿನ್ನ ಕರೆಸಿ ಕೊರಗಿದೆ
ಚೈತ್ರದುದಯ ನಂದಿತಿಂದು ಮೌನ ಅರಸಿ ಕೊರಗಿದೆ
ದೂರದಾರಿ ಸೇರಿಯಿಂದು ನಮ್ಮನೆಲ್ಲಿ ಸೆಳೆವುದೊ
ಜಲವು ಬತ್ತಿ ಬುವಿಯಲ್ಲಿ ತಂಪ ಮರೆಸಿ ಕೊರಗಿದೆ
ಮರದ ಎಲೆಯು ಉದುರಿತೊ ಸದ್ದುಯೇಕೆ ಆಗಿದೆ
ಬೆಂಕಿ ಹತ್ತಿ ಜ್ವಾಲೆಯೆಳೇ ಹೀಗೆ ಉರಿಸಿ ಕೊರಗಿದೆ
ಹತ್ತು ಹಲವು ಜೀವದೊಲವು ಎತ್ತ ಸತ್ತು ಹೋದವೊ
ಬಯಲ ತುಂಬ ಸುಟ್ಟ ಸಿರಿಗೆ ಒಲವ ಇರಿಸಿ ಕೊರಗಿದೆ
ಬಾನಿನೊಳಗೆ ಚಂದ್ರ ಬರದೆ ದೂರ ಸರಿದ ಈಶನು
ಕನಸಿನಲ್ಲಿ ನನಸು ಇರದೆ ಸವಿಯ ಸರಿಸಿ ಕೊರಗಿದೆ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ