ಗಂಗಾ ಜಲ

ಗಂಗಾ ಜಲ

ಕವನ

ಭಗೀರಥ ಪ್ರಯಾತ್ನದಿಂದ ಧರೆಗಿಳಿದು ಬಂದಳು ಗಂಗೆ

ಶಾಶ್ವತವಾಗಿ ನೀ ಭುವಿಯಲ್ಲೇ ತಂಗೆ

 

ನೆಲ ಜಲ ಆಹಾರ ಮಾನವನ ಬದುಕಿಗೆ ಆಧಾರ

ಸಕಲ ಜೀವಿಗಳಿಗು ನೀಡುವುದು ಸಾಕಾರ

 

ನೆಲಜಲ ರಕ್ಷಣೆ ಇರಲಿ ನಮ್ಮಯ ಹೊಣೆ

ನೀರಿದ್ದರೆ ನಮಗೆ ಬರದೆಂದು ಬವಣೆ 

 

ಭೂ ಮಂಡಲದ ಮುಕ್ಕಾಲು ಪಾಲು ಜಲ

ಬಳಸುವದಕ್ಕೆ ಸ್ವಲ್ಪವೇ  ಮಾತ್ರ ಅಮೃತ ಜಲ 

 

ಮಾನವ ಪಶು ಪಕ್ಷಿಗಳಿಗೆ ಬೇಕು ನೀರು

ಮರ ಗಿಡಗಳಿಗೂ ಬೇಕು ಬಿಡಲು ಬೇರು

 

ವ್ಯರ್ಥ ಮಾಡದೆ ಹಿತಮಿತವಾಗಿ ಬಳಸು

ಮುಂದಿನ ಪೀಳಿಗೆಗಾಗಿ ಉಳಿಸು

 

ನೀರಿಲ್ಲದ ಬದುಕು ಊಹಿಸಲು ಅಸಾಧ್ಯ

ಮಾನವನಿಗೆ ಮಾತ್ರ ಉಳಿಸಲು ಸಾಧ್ಯ

 

-ಎಸ್. ನಾಗರತ್ನ  ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್