ಗಂಡು ಮಕ್ಕಳ ಕಥೆಯಿದು..
ಕವನ
ವಯಸ್ಸಿಗೂ ಮೀರಿರುವ
ಜವಾಬ್ದಾರಿ ಹೆಗಲಿಗೇರಿಸಿ,
ಮನೆ ಬಿಟ್ಟು ಪಟ್ಟಣ ಸೇರಿ
ಊಟಕ್ಕೂ ಪರದಾಡುವ
ಗಂಡು ಮಕ್ಕಳ ಕಥೆಯಿದು..//
ಊರ ಅಗಸಿ ತಿರುವಿನಲ್ಲಿ
ಉಮ್ಮಳಿಸಿ ಬಂದ ದುಃಖ,
ಅಮ್ಮ ಕಟ್ಟಿದ ಬುತ್ತಿ ಸವರಿ
ದೀರ್ಘ ಉಸಿರಲ್ಲಿ ಮಿಲನ;
ಗಂಡು ಮಕ್ಕಳ ಕಥೆಯಿದು..//
ಎಷ್ಟು ತಡೆದರೂ ನೋವು
ತುಟಿಯಲ್ಲಿ ಬಂಧಿ ಆಗಿದೆ;
ಕಂಬನಿಯನು ಮರೆಸಿದೆ,
ಸಂಸಾರ ದಿನಸಿಗಳ ಪಟ್ಟಿ;
ಗಂಡು ಮಕ್ಕಳ ಕಥೆಯಿದು..//
ಎಲ್ಲದರಲ್ಲಿ ತನ್ನ ತ್ಯಾಗವು
ಕಾಣಿಸದೆಲ್ಲಿ ಹೊರಗಡೆಗೆ;
ಅಕ್ಕ, ತಂಗಿ, ತಮ್ಮ ದಡಕ್ಕೆ
ಹಗಲಿರುಳು ದುಡಿಯುವ;
ಗಂಡು ಮಕ್ಕಳ ಕಥೆಯಿದು..//
ಚಿಂತೆಯಲ್ಲಿಯೇ ಮುಳುಗಿ
ನರೆ ಮೂಡಿ ಕೇಶ ಕೃಶದಲಿ
ಬಾಚನಿಗೆಯಲ್ಲೇ ಆತ್ಮಹತ್ಯೆ!
ಮೊಟ್ಟೆಯಾಯ್ತು ತಲೆಯಿಲ್ಲಿ;
ಗಂಡು ಮಕ್ಕಳ ಕಥೆಯಿದು..//
-ದ್ಯಾವಪ್ಪ ಎಂ. @ಮುತ್ತತ್ತಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
