ಗಂಡು-ಹೆಣ್ಣು
ಕವನ
-1-
ಈ ಗಂಡೆಂದರೆ ಹೀಗೇ ಕಣೇ...
ನಾನೇ ಹೋಗಿ ಬಿದ್ದ ಸೆರೆಮನೆ!
ನನ್ನ ಸ್ವಚ್ಛಂದವ ಬಿಗಿದು ಕಟ್ಟಿ
ಕಳೆದೆ ಇಲ್ಲೇ ನನ್ನ ಅಂತರಂಗ ಸ್ವರವನೆ!
ಈ ಗಂಡೆಂದರೆ ಹೀಗೇ ಕಣೇ...
ಬಿಟ್ಟು ಬಿಡದ ಬಾಹು ಬಂಧನ!
ದೂರವಿರುವ ಅದರ ಪರಿಧಿಯನ್ನು
ಮುಟ್ಟುವಷ್ಟೂ ನನ್ನಲ್ಲಿಲ್ಲ ಇಂಧನ!
******
-2-
ಹುಡುಗಾ,
ಈ ಹೆಣ್ಣೆಂದರೆ ಹೀಗೇ ಕಣೋ,
ಬಿಟ್ಟಿರದ ಭವದ ಬಂಧನ!
ಮತ್ತೆ ಪಡೆವ ಮಾತೇ ಇಲ್ಲ
ಇವಳಿಗಿತ್ತ ನಿನ್ನ ಸ್ವಚ್ಛಂದನ!
ಮರಳಿ ಮರಳಿ ಬಳಿಗೆ ಹೋಗಿ
ಸೆಳೆವ ಇವಳ ಅಧರ ಚುಂಬನ!
ಬಿಗಿದು ಕಟ್ಟಿ, ದುಡಿಯಲಟ್ಟಿ
ನಿನ್ನ ಮಾಡುವುದು ನಿಜ ಹುಂಬನ!
-ಮಾಲು
ಈ ಹೆಣ್ಣೆಂದರೆ ಹೀಗೇ ಕಣೋ,
ಬಿಟ್ಟಿರದ ಭವದ ಬಂಧನ!
ಮತ್ತೆ ಪಡೆವ ಮಾತೇ ಇಲ್ಲ
ಇವಳಿಗಿತ್ತ ನಿನ್ನ ಸ್ವಚ್ಛಂದನ!
ಮರಳಿ ಮರಳಿ ಬಳಿಗೆ ಹೋಗಿ
ಸೆಳೆವ ಇವಳ ಅಧರ ಚುಂಬನ!
ಬಿಗಿದು ಕಟ್ಟಿ, ದುಡಿಯಲಟ್ಟಿ
ನಿನ್ನ ಮಾಡುವುದು ನಿಜ ಹುಂಬನ!
-ಮಾಲು
Comments
ಗಂಡು ಹೆಣ್ಣುಗಳ ನಿಜ ರೂಪ ದರ್ಶನ.
ಗಂಡು ಹೆಣ್ಣುಗಳ ನಿಜ ರೂಪ ದರ್ಶನ....ಸೂಪರ್ ಕಣ್ರೀ ..
ಪದ್ಯವನ್ನು ರೈಮ್ಸ್ ತರಹ ಬರೆದದ್ದು ಹಿಡಿಸಿತು...ಈ ತರಃ ಬರೆಯೋದು ಕಷ್ಟದ ಕೆಲಸ...!!
ಕೆಲ ಪದ ವಾಕ್ಯ ಪ್ರಯೊಗಗಳು ಹಿಡಿಸಿದವು..(ಸ್ವಚ್ಛಂದನ!, ಹುಂಬನ!,ನನ್ನಲ್ಲಿಲ್ಲ ಇಂಧನ!)
ಶುಭವಾಗಲಿ..
\|
In reply to ಗಂಡು ಹೆಣ್ಣುಗಳ ನಿಜ ರೂಪ ದರ್ಶನ. by venkatb83
ಪ್ರತಿಕ್ರಿಯೆ ಬರೆದ ತಮಗೂ ಮತ್ತು
ಪ್ರತಿಕ್ರಿಯೆ ಬರೆದ ತಮಗೂ ಮತ್ತು ಓದಿ ಇಷ್ಟ ಪಟ್ಟ ಎಲ್ಲ ಗೆಳೆಯರಿಗೂ ಧನ್ಯವಾದಗಳು.