ಗಂಡ ಹೆಂಡಿರ ಜಗಳ ಹೀಗಿರಬೇಕು...

ಗಂಡ ಹೆಂಡಿರ ಜಗಳ ಹೀಗಿರಬೇಕು...

ಕವನ

ಗಂಡ ಹೆಂಡಿರ ಜಗಳ ಹೀಗಿರಬೇಕು

ಹುಣ್ಣಿಮೆಯ ಚಂದಿರನ ಮರೆಯಾಗಿಸಿದ

ಕರಿ ಮೋಡದ ಹಾಗೆ

ಅರೆಕ್ಷಣದಲಿ ಕರಿ ಮೋಡವು ಸರಿದು

ಪೂರ್ಣ ಚಂದಿರನ ಸೊಬಗನ್ನು

ಕಂಡು ಆನಂದಿಸುವ ಹಾಗೆ

 

ಗಂಡ ಹೆಂಡಿರ ಜಗಳ ಹೀಗಿರಬೇಕು

ಕೋಪವೆಂಬ ಕಲ್ಲುಗಳು

ನೀರನ್ನು ಕದಡಿದ ಹಾಗೆ

ಅಲ್ಪ ಸಮಯದಲ್ಲಿ ಶಾಂತವಾದ

ಆ ನೀರನ್ನು ಕುಡಿಯುವ ಹಾಗೆ

 

ಗಂಡ ಹೆಂಡಿರ ಜಗಳ ಹೀಗಿರಬೇಕು

ಮಕ್ಕಳ ಆಟಿಕೆಯಲ್ಲಿ ಹೊರ ಸೂಸುವ

ಆಕರ್ಷಕ ಗುಳ್ಳೆಗಳ ಹಾಗೆ

ಗಾಳಿಯಲ್ಲಿ ಹಾರಿದ ಸುಂದರ ಗುಳ್ಳೆಗಳು ಒಡೆದಾಗ

ಮಕ್ಕಳು ನೋಡಿ ಆನಂದಿಸಿ

ಕುಣಿದಾಡುವ ಹಾಗೆ

 

ಗಂಡ ಹೆಂಡಿರ ಜಗಳ ಹೀಗಿರಬೇಕು

ಜಾತ್ರೆಗಳಲ್ಲಿ ದೊಡ್ಡ ಶಬ್ದದೊಂದಿಗೆ

ಆಕಾಶಕ್ಕೆ ಚಿಮ್ಮವ ಪಟಾಕಿಯ ಹಾಗೆ

ಕ್ಷಣಮಾತ್ರದಲ್ಲಿ ಮೂಡುವ

ವರ್ಣರಂಜಿತ ನಕ್ಷತ್ರ ಪುಂಜದ ಬೆಳಕು

ಮನಗಳ ರಂಜಿಸುವ ಹಾಗೆ

 

ಗಂಡ ಹೆಂಡಿರ ಜಗಳ ಹೀಗಿರಬೇಕು

ಕಿವಿಯೋಲೆ ಚುಚ್ಚುವಾಗ ನೋವಿನಿಂದ

ಅಳುವ ಮಗುವಿನ ಹಾಗೆ

ಧರಿಸಿದ ಕಿವಿಯೋಲೆಯಿಂದ

ಆಕರ್ಷಕವಾಗಿ ಕಾಣುವ

ಮಗುವನ್ನು ಕಂಡು  ಆನಂದಿಸುವ ಹಾಗೆ.

-ಮಿತ್ರಪಟ್ಣ ಗೋಪಿಕಾಪ್ರಿಯ, ವಸಯಿ ಮುಂಬೈ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್