" ಗಂಧರ್ವ ಗಾನ ' ( ಕವನ )
ಕವನ
ವಿಶಾಲ ನೀಲ ನಭ
ಅಲೆ ಅಲೆಯಾಗಿ
ತೇಲಿ ಬರುತಿದೆ
' ಗಂಧರ್ವ ಗಾನ '
ಕ್ಷಣ ಮಿತಿಯ ಲೋಕ
ಅಲೌಕಿಕ ತನ್ಮಯತೆ
ಹಬ್ಬಿ ಹರಡಿವೆ
ಮನುಕುಲದ ' ಭಾವಗಳು '
ವಂಚಕ ಜಗ
ಹಗಲು ದರೋಡೆಯ
ವಾಸ್ತವ ಬದುಕು
ಎಲ್ಲಿಯೋ ಅಂಕುರಿಸಿ
ಸದ್ದಿಲ್ಲದೆ ಸುಳಿವಿಲ್ಲದೆ
ವ್ಯಾಪಿಸಿವೆ
ಮಾನವೀಯ ಮೌಲ್ಯಗಳ
' ಮೂಕ ರಾಗ '
ಅವ್ಯಕ್ತೆ ವೀಣಾಪಾಣಿ
ನುಡಿಸುತಿಹಳು
' ರಾಗಗಳ ಮಾಲೆ '
ಪಸರಿಸಿದೆ ಸುತ್ತೆಲ್ಲ
ಗುಂಯ್ಗುಡುವ
' ಸ್ವರ ಸಾಗರ ' ಅದು
ಆನಂದ ಸಾಗರವೋ
ಶೋಕದ ವೈತರಣಿಯೋ ?
ಅವ್ಯಕ್ತ ' ರಾಗ ಮಾಲಿಕೆ '
ವ್ಯಾಪಿಸಿದೆ ಜಗದ ತುಂಬ
ಆಕಾಶದುದ್ದಗಲ
ದಿಗ್ದಿಗಂತದಾಚೆಯ
ಪರಿಧಿಯನು ಮೀರಿ
***