ಗಜಲ್
ಕವನ
ಕನಸ ಕನಸೊಳಗೆ ಕತ್ತಲಾದೆ ಸಾಕಿ
ಕಣ್ಣೀರ ಹೂಜಿಯೊಳಗೆ ಮೀನಾದೆ ಸಾಕಿ
ಮನಸ ಮಳಲೊಳಗೆ ಮರುಳಾದೆ
ನನಸ ನೆರಳೊಳಗೆ ಬಿಸಿಲಾದೆ ಸಾಕಿ
ಮಾತು ಮಾತೊಳಗೆ ಬರುಡಾದೆ
ಮೌನದ ಎದುರೊಳಗೆ ಮೂಕಾದೆ ಸಾಕಿ
ಪುಟ ಪುಟಗಳೊಳಗೆ ಕಥೆಯಾದೆ
ಚರಿತ್ರೆ ಪುಟದೊಳಗೆ ಗುರುತಾದೆ ಸಾಕಿ
ಮೇಣದ ಉರಿಯೊಳಗೆ ಬೆಳಕಾದೆ
ಕರ್ಪೂರದ ಕಂಪೊಳಗೆ ತಂಪಾದೆ ಸಾಕಿ
ಹುಣ್ಣಿಮೆಯ ಚಂದ್ರನೊಳಗೆ ಕಲೆಯಾದೆ
ಆಕಾಶದ ಚುಕ್ಕೆಗಳೊಳಗೆ ಒಂದಾದೆ ಸಾಕಿ.
ಪ್ರಕಾಶ.ಬಿ.ಜಾಲಹಳಿ
Comments
ಉ: ಗಜಲ್
ಉ: ಗಜಲ್
ಉ: ಗಜಲ್