ಗಜಲ್
ಕವನ
ನೀ ಹೀಗೆ ಮೌನವಾಗಿ ನಡೆದುಹೋಗ್ತಿಯಾ ಎಂದುಕೊಂಡಿರಲಿಲ್ಲಾ ಸಾಕಿ
ಹೊಗೆ ಎದ್ದ ಮೇಲೆಯೇ ಕೆಂಡವನ್ನರಸುತ್ತೀ ಎಂದುಕೊಂಡಿರಲಿಲ್ಲಾ ಸಾಕಿ.
ಕೊನರುವ ಕ್ಸ್ಕ್ಷಣಗಳ ನಾನು ಮರೆತಿರಲಿಲ್ಲ ಕೊನೆಕೊನೆಗೆ
ನೀನಾಯ್ದ ಕ್ಸ್ಕ್ಷಣಗಳಿಗೆ ಗೋಗರೆದು ಹೀಗೆ ಅಳುತ್ತೀ ಎಂದುಕೊಂಡಿರಲಿಲ್ಲಾ ಸಾಕಿ.
ಮ್ರುದುಲತೆಗಳು ನನ್ನೆದೆ ತುಂಬಾ ಆವರಿಸಿಕೊಂಡು ಹಸಿರುಟ್ಟಿದ್ದವು
ಗಾಯಗಳು ಕೆಲವೊಂದು ಹಸಿರುಗಟ್ಟುತ್ತವೆ ಹೀಗೆ ಎಂದುಕೊಂಡಿರಲಿಲ್ಲಾ ಸಾಕಿ
ಕೆಲವೊಂದು ಸಲ ಮಳೆಯನ್ನೆ ದಿಟ್ಟಿಸುತ್ತವೆ ಕಣ್ಣುಗಳು
ಮೂಲ ತಾವೆನ್ನುವ ನಿಜವನ್ನೆ ಮರೆಯುತ್ತವೆ ಎಂದುಕೊಂಡಿರಲಿಲ್ಲಾ ಸಾಕಿ.
ನೀ ಎದ್ದು ನಡೆದೇಬಿಟ್ಟೆ ಭಾರದಿಂದ ಹೆಜ್ಜೆ ಹಾಕುತ್ತಾ ಆಗಸ್ಟೇ
ನನ್ನ ಸಮಾಧಿಯ ಕನಸು ಹೀಗೆ ನನಸಾಗುತ್ತೆ ಎಂದುಕೊಂಡಿರಲಿಲ್ಲಾ ಸಾಕಿ.
Comments
ಉ: ಗಜಲ್