ಗಜಲ್
ಕವನ
ನೋವನ್ನು ಹೀಗೊಂದು ಸಲ ಕಣ್ಣಿಂದ ಸವರಿ ಬಿಡುವ ಮನಸ್ಸಾಗುತ್ತಿದೆ,
ಉರಿಯುವ ಕೆಂಡವೊಂದರ ಮೇಲಿರುವ ಬೂದಿ ಊದಿ ಬಿಡುವ ಮನಸ್ಸಾಗುತ್ತಿದೆ.
ದೇಹವೊಂದು ಕೊನರುತ್ತದೆ ತಂಗಾಳಿಯ ತಂಪಿನಲಿ ಒಮ್ಮೊಮ್ಮೆ
ಯಾತನಾಮಯ ಈ ಗಳಿಗೆಗಳಿಗೆ ಗೋರಿಯಿಂದ ಎದ್ದು ಬಿಡುವ ಮನಸ್ಸಾಗುತ್ತಿದೆ.
ನಿದ್ದೆಯಿಲ್ಲದೆ ತಲ್ಲಣಿಸುವ ನಿಟ್ಟುಸಿರುಗಳಿವೆ ಬದುಕಲ್ಲಿ.
ಕೊನೆಗೂ ನೆಮ್ಮದಿಯ ಕವಿತೆಯಿಂದ ಅತ್ತು ಬಿಡುವ ಮನಸ್ಸಾಗುತ್ತಿದೆ .
ಭುಗಿಲೆದ್ದ ಆ ಪ್ರೀತಿಯ ಸ್ಫರ್ಶ ತುದಿಗಾಲಲ್ಲಿ ನಿಂತಿದ್ದು ನಿಜ...
ಆದರೂ ಬದ್ದವಾಗಿರುವ ವ್ಯಥೆಯ ಕೆಯ್ ಬಿಡುವ ಮನಸ್ಸಾಗುತ್ತಿದೆ.
ಕ್ಷಮೆಯಂಚಿನ ಕಣ್ಣು ತೇವಗೊಂಡಿದ್ದು ಸುೞಲ್ಲ..
ಮುನಿದುಕೊಂಡ ಆ ಶಬ್ದಗಳಿಗೆ ಅನಿರೀಕ್ಷಿತವಾಗಿ ಕರೆದು ಬಿಡುವ ಮನಸ್ಸಾಗುತ್ತಿದೆ...!!!
Comments
ಉ: ಗಜಲ್
ಉ: ಗಜಲ್
In reply to ಉ: ಗಜಲ್ by mmshaik
ಉ: ಗಜಲ್
ಉ: ಗಜಲ್