ಗಜಲ್

ಗಜಲ್

ಕವನ

ಒಂದು ಹನಿ  ಕಣ್ಣೀರಿಗೆ ಎಸ್ಟೋ ನೆನಪುಗಳು ಉರಿದು ಹೋದವು

 ಈಗಸ್ಟೇ ಎಳೆ ಬಿಸಿಲಿಗೆ ಮೊಗ್ಗುಗಳು ಉರಿದು ಹೋದವು.

ಸಂಜೆ ಉದುರಿದ ಹನಿಗಳು  ಮಾಯವಾಗಿದ್ದು ಭ್ರಮೆ ಎನಿಸಿತ್ತು

ಭೂಮಿಯಲಿ ಅದೆಸ್ಟೋ ಭಾವಗಳು ಉದಯಿಸದೆ ಉರಿದು ಹೋದವು.

ಹೆಜ್ಜೆ-ಹೆಜ್ಜೆಗೂ ಬಯಸಿದ್ದು ನಿನ್ನನ್ನೇ ಗೊತ್ತಿತ್ತು ಇಳೆಗೆ

ಕಲ್ಪನೆಗಳೆಲ್ಲಾ ಬೆಂದು ಮಧ್ಯಾಹ್ನದ ಮುಂಚೆಯೇ ಉರಿದು ಹೋದವು.

ಬಿಡಿಸಿದ ರಂಗೋಲಿಗೆ ಬಣ್ಣ ಹುಡುಕಿತ್ತು ಕಾಮನಬಿಲ್ಲು ಕಂಡು

ಕೊಂಡುಕೊೞುವ ಸಂಧರ್ಭದ ಪರಿಕರಗಳು ಉರಿದು ಹೋದವು.

ಮನೆಯ ಹಿತ್ತಲೆಸ್ಟೋ ಪ್ರೀಯವಾಗಿತ್ತು ಕೆಲವೊಂದು ಸಲ

ನಿನ್ನದೇ ಸ್ವತ್ತಾಗಿದ್ದ ಯಜಮಾನಿಕೆಯ ಕೋಟೆಗಳು ಉರಿದು ಹೋದವು.