ಗಜಲ್-2

ಗಜಲ್-2

ಬರಹ

ಗಜಲ್

ಮಧುಶಾಲೆಗೆ ಹೋದರೂ ನಿನ್ನವೇ ನೆನಪುಗಳು ಕೊಂಚ ಮಧುವ ತಾ ಸಾಕಿ
ಕುಡಿದು ತೂರಾಡಿದರೂ ನಿನ್ನವೇ ಕನಸುಗಳು ಕೊಂಚ ಮಧುವ ತಾ ಸಾಕಿ

ಇರುಳು ನೆಲವನ್ನೆಲ್ಲ ಗಾಢವಾಗಿ ಕವಿದಿದೆ ಜಗವೆಲ್ಲ ಮಲಗಿದರೂ
ಆಗಸದಲಿ ಮಿನುಗುತಿವೆ ನಿನ್ನವೇ ಕಣ್ಣುಗಳು ಕೊಂಚ ಮಧುವ ತಾ ಸಾಕಿ

ಬುವಿಯಲ್ಲಿ ನಿನ್ನ ಪ್ರೀತಿಯ ಅಳೆಯಹೋದರೆ ದಾರಿಹೋಕರೆಲ್ಲ ನಗುವರು
ಹಾದಿಯಲೆಲ್ಲ ನನ್ನವೇ ಹೃದಯದ ಚೂರುಗಳು ಕೊಂಚ ಮಧುವ ತಾ ಸಾಕಿ

ನಿಶೆಯೇರಿದೆಯೆಂದು ಗೆಳೆಯರು, ಎಚ್ಚರವಾಗಿಹೆನೆಂದು ಹೇಳುಅ ಅರಿವು
ಪ್ರತಿ ಗುಟುಕಿನಲ್ಲೂ ನಿನ್ನದೇ ಪ್ರೇಮದ ಹನಿಗಳು ಕೊಂಚ ಮಧುವ ತಾ ಸಾಕಿ

ಹೊತ್ತಾಯ್ತೆಂದು ಬಾಗಿಲು ಮುಚ್ಚುತಿಹನು ಮಾಲಿಕ, ಹೊರಹೋಗಲೇಬೇಕಲ್ಲ
ಮಧುಬಟ್ಟಲಲೂ ಸೋಕಿವೆ ನಿನ್ನವೇ ಅಧರಗಳು ಕೊಂಚ ಮಧುವ ತಾ ಸಾಕಿ
-ಸಿದ್ಧರಾಮ ಹಿರೇಮಠ.

* ಸಾಕಿ = ಮಧುಶಾಲೆಯಲ್ಲಿ ಮಧುವ ಕೊಡುವ ಸೇವಕ