ಗಜ಼ಲ್

ಗಜ಼ಲ್

ಕವನ

     ಗಜಲ್ 

ಹಾದಿಯಲಿ ನಡೆವಾಗ ಕರೆಯುತ್ತಾರೆ ಯಾರೋ
ಎದೆಯಲ್ಲಿ ಪಿಸುನುಡಿಯ ಬರೆಯುತ್ತಾರೆ ಯಾರೋ

ತಿರುವುಗಳು, ಹಳ್ಳ- ತಿಟ್ಟು ದಾರಿಯದೆಷ್ಟು ಕಠಿಣ
ಕೈಹಿಡಿದು ಕರೆದೊಯ್ದು ಹರಸುತ್ತಾರೆ ಯಾರೋ

ಅನುಬಂಧಗಳು ಹೇಗೆಲ್ಲ ಕಳಚಿಹೋಗುತ್ತವೆ
ಹಾಲಲ್ಲಿ ಹುಳಿಯನ್ನು ಬೆರೆಸುತ್ತಾರೆ ಯಾರೋ

ಊರುಗೋಲಾಗಿ ಆಧರಿಸಿದ ಸಂದರ್ಭಗಳೆಷ್ಟು
ಮಾತಿನ ಆವೇಶದಲ್ಲಿ ಮರೆಯುತ್ತಾರೆ ಯಾರೋ

ಕನಸುಗಣ್ಣಿನ ಹುಡುಗ ಕಳೆದೇ ಹೋದನೇನು
ಕವಿತೆಗಳಿಗೆ ಕೆಂಡವ ಸುರಿಯುತ್ತಾರೆ ಯಾರೋ

ಹಾಲಿನದು ಹಾಲಿಗೆ ನೀರಿನದು ನೀರಿಗೆನ್ನುತ್ತಾರೆ
ಹಾಲೆಂದು ಸುಣ್ಣದ ನೀರು ಕುಡಿಸುತ್ತಾರೆ ಯಾರೋ

ನಿನ್ನ ಪಾಡು ನಿನಗೆ ಲೋಕದ್ದು ಲೋಕಕ್ಕೆ 'ಜಂಗಮ'
ಎಂದರೂ ಪಾತ್ರಗಳ ಬದಲಿಸುತ್ತಾರೆ ಯಾರೋ

★ಡಾ ಗೋವಿಂದ ಹೆಗಡೆ