ಗಜಲ್
ಕವನ
ನಿನ್ನ ವಿಮುಖತೆಗೆ ಕಾರಣ ಹುಡುಕುತ್ತಿರುವೆ ಸಾಕಿ
ಈ ರೀತಿ ಬದುಕಲು ನೆಪವೊಂದು ಹುಡುಕುತ್ತಿರುವೆ ಸಕಿ.
ಆಗಸದೆದೆಯ ಚಿಕ್ಕೆಗಳ ವ್ಯಾಖ್ಯಾನಿಸಲಾಗಲಿಲ್ಲ
ನನ್ನ ಗುಡಿಸಲಿಗೆ ಮಿಂಚುಹುಳುಗಳ ಹುಡುಕುತ್ತಿರುವೆ ಸಾಕಿ.
ಕತ್ತಲಾಗಿದೆ ಬೆಳಕ ಮಾತಾಡುವುದು ಬೇಡ
ಈ ಮೂಲಕ ಮಾತುಗಳನ್ನು ಮೂಸೆಯಲ್ಲಿ ಅದ್ದಿ ಹುಡುಕುತ್ತಿರುವೆ ಸಾಕಿ.
ಬಣ್ಣತೊಟ್ಟ ಆಕ್ಷಣಗಳು ಕಣ್ಣೆದುರಿಗಿವೆ
ಸಿಪ್ಪೆ ತೆಗೆದು ಹ್ರುದಯದ ಮಿಡಿತದ ಕ್ಷ ಣಗಳ ಹುಡುಕುತ್ತಿರುವೆ ಸಾಕಿ.
ಹೊತ್ತೇರಿದಂತೆ ಮುಖದಲ್ಲೀಗ ಪ್ರಶ್ನೆಗಳ ಸುಕ್ಕುಗಳು
ಮೂರು ಗಂಟುಗಳ ಮಿತಿಯಲ್ಲಿ ಉತ್ತರ ಹುಡುಕುತ್ತಿರುವೆ ಸಾಕಿ.
Comments
ಉ: ಗಜಲ್
ಉ: ಗಜಲ್