ಗಜಲ್
ಕವನ
ಅವಕಾಶಗಳಿದ್ದ ಕಡೆ ನುಸುಳಬೇಡ ಸಾಕಿ
ಕ್ರಿಸ್ತನಂತೆ ನೀ ನಿಲ್ಲಬೇಕಾದಿತು ನುಸುಳಬೇಡ ಸಾಕಿ
ಕಾಲ ಕೊನೆಗೆ ನಿರ್ಣಯಿಸುತ್ತದೆ ನಂಬಿಕೆಯುಂಟು
ಮೌನ ಧರಿಸಿದ ಗೋರಿಗಳೆಡೆ ನುಸುಳಬೇಡ ಸಾಕಿ
ಗೋರಿಗಳ ಭಾ ಷೆ ಅರ್ಥವಾಗದಿರಬಹುದು
ಭಾ ಷೆ ಯರಿತಿಲ್ಲ ಎನ್ನುವ ಕಾರಣಕ್ಕೆ ನುಸುಳಬೇಡ ಸಾಕಿ
ಪ್ರತಿ ಗೋರಿಯೂ ಹೊತ್ತಿ ಉರಿಯುತ್ತಿದೆ ರಾತ್ರಿಯಲ್ಲಿ
ಹಗಲು ಅರ್ಥ್ಯೆಸಲಾಗದೆಂದು ನುಸುಳಬೇಡ ಸಾಕಿ
ಸತ್ಯ ಬಯಲಾದಿತೆಂಬ ಹೆದರಿಕೆ ಬೇಡ
ಕ್ರೀಮಿ-ಕೀಟಗಳ ಹಸಿವಿನ ಕಡೆ ನೀ ನುಸುಳಬೇಡ ಸಾಕಿ.
Comments
ಉ: ಗಜಲ್
ಉ: ಗಜಲ್
In reply to ಉ: ಗಜಲ್ by mmshaik
ಉ: ಗಜಲ್