ಗಝಲ್ ಒಂದರ ಸುತ್ತ...

ಗಝಲ್ ಒಂದರ ಸುತ್ತ...

ಕವನ

ಮಲಗಿದವನ ಎದೆಯ ಬಾಗಿಲು ತಟ್ಟುತಿರುವೆ  ನೀ ಯಾರೆ

ಮಲ್ಲಿಗೆ ಕಂಪು ಸೂಸಿ ಹೊಸ್ತಿಲ ಮೆಟ್ಟುತಿರುವೆ ನೀ ಯಾರೇ ||

 

ಕೆಸರಿನಲಿ ಅರಳಿದ ತಾವರೆಯ ಸಹೋದರಿಯಾ ನೀನು

ನಸು ನಾಚುತ ನನ್ನೊಳಗೆ ಪ್ರೀತಿ ಪೈರು ಹಚ್ಚುತಿರುವೆ ನೀ ಯಾರೇ ||

 

ಹೂಬನದಿ ಚಿಗುರಿದ ಕೆಂಗುಲಾಬಿಯಂತೆ ಕಾಣಿಸುವೆಯಲ್ಲ

ಹೃದಯದಿ ಒಲುಮೆಯ ಚಿಲುಮೆ ಚಿಮ್ಮುತಿರುವೆ ನೀ ಯಾರೇ ||

 

ಪೊದರಲಿ ಕೊನರಿದ ಕೆಂಪು ದಾಸವಾಳದಂತೆ ಸೆಳೆಯತಿಹೆಯಲ್ಲ

ಸುಗಂಧದ ಅಮಲಲಿ ತೇಲಿಸುತ ಬೀಗುತಿರುವೆ ನೀ ಯಾರೇ ||

 

ಸಂಜೆಗೆ ಸಿಗುವ ಸಂಪಿಗೆ ಕುಲದವಳಿಗೆ ಬಿಜಲಿ ದಾಸನಾದನಲ್ಲ

ಮುಂಜಾವಿನ ಕನಸಿಗೆ ಬೆರಗಾಗಿ ಬೆಚ್ಚುತಿರುವೆ ನೀ ಯಾರೇ ||

 

-ಈರಪ್ಪ ಬಿಜಲಿ ಕೊಪ್ಪಳ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್