ಗಝಲ್ ಗಳು ಎರಡು !

ಗಝಲ್ ಗಳು ಎರಡು !

ಕವನ

೧.

ಕುರ್ಚಿಯದು ಗಟ್ಟಿಯಿದ್ದರೆ ತಾನೆ ರಾಜಕಾರಣ

ಮನೆಯೊಳಗೆ ಶಾಂತಿಯಿದ್ದರೆ ಕಾಣೆ ರಾಜಕಾರಣ

 

ಸತ್ಯವಂತರುಯಿಂದು ಸಮಾಜದಲ್ಲಿಹರೆ ಹುಡುಕು

ತಪ್ಪುತ್ತಲಿಹರೆಂದು ಅವರಿಗೆ ಬಾನೆ ರಾಜಕಾರಣ

 

ಗೊಡ್ಡು ಸಂಪ್ರದಾಯದ ಪಾಂಡಿತ್ಯ ಕೆಲವರದಿಂದು

ಮಾಳಿಗೆಯಲ್ಲಿ ಕುಳಿತವರಿಗೆ ಶ್ಯಾನೆ ರಾಜಕಾರಣ

 

ಬೆತ್ತಲಾಗಿದೆ ಜಗತ್ತು ಸಂಸ್ಕೃತಿಯನು ಕೇಳುವರಿಲ್ಲದೆ

ಹಂಚಲಾಗಿದೆ ಅಧಮತೆಯೆಂಬ ಸೇನೆ ರಾಜಕಾರಣ

 

ರಾಮರಾಜ್ಯವು ಎಂದೋ ಮುಳುಗಿ ಹೋಗಿದೆ ಈಶಾ

ಜನಸಾಮಾನ್ಯರ ಮೈಯೊಳಗೆ ತುಂಬಾ ಬೇನೆ ರಾಜಕಾರಣ

***

೨.

ನೀನೆನಗೆ ಸಿಗುವಿಯೊ ಬರದೆ ಹೋಗುವಿಯೊ

ಕಾರಣವು ಇಲ್ಲದೆಯೆ ಮರದೆ ಹೋಗುವಿಯೊ

 

ಮನದ ಮಾತಿನ ಸವಿಯು ವಿಷವಾಗಿ ಹೋಯಿತೆ

ನೊಂದವರು ಬಂದಾಗ ತೊರದೆ ಹೋಗುವಿಯೊ

 

ಜೀವನದ ನಡೆಗಳಲಿ ಹೊಸತನವು ಎಲ್ಲಿದೆಯೊ

ಚೇತನದ ನಡೆಯನು ಹೊರದೆ ಹೋಗುವಿಯೊ

 

ಬಂಧನದ ಎಡೆಗಳಲಿ ಹೃದಯ ಬಳಲುತಯಿರಲು 

ಪ್ರೀತಿಯನು ತುಂಬಿರುವೆ ನೆರದೆ ಹೋಗುವಿಯೊ

 

ಬುವಿಯೊಳಗೆ ಬಾಳುವುದ ಕಲಿಯಬೇಕೆ ಈಶಾ

ಸಪ್ನಗಳ ಮಂದಿರವ ತರದೆ ಹೋಗುವಿಯೊ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್