ಗಝಲ್ ಗಳೊಂದಿಗೆ...
ಕವನ
ಬೆತ್ತಲೆಯಾಗದಿರಿ ಮನಸಿನಲಿ ಗೆಳೆಯರೆ
ಕತ್ತಲೆಯೆನದಿರಿ ನನಸಿನಲಿ ಗೆಳೆಯರೆ
ಯೋಚನೆಯೊಡನೆ ಪಯಣವಿಂದು ಬೇಕೆ
ನಡೆದಾಡದಿರಿ ಕನಸಿನಲಿ ಗೆಳೆಯರೆ
ಗುಬ್ಬಚ್ಚಿಯೊಡನೆ ವಾಸವದು ಸಾಧ್ಯವೆ
ಕಣ್ಮುಚ್ಚದಿರಿ ತನುವಿನಲಿ ಗೆಳೆಯರೆ
ಊಟದೊಡನೆ ಸವಿಯಿಂದು ಸೇರಿತೆ
ತೊರೆಯದಿರಿ ಒಲವಿನಲಿ ಗೆಳೆಯರೆ
ಮಾತಿನೊಡನೆ ಹೊಂಗನಸಿರಲಿ ಈಶಾ
ತಡೆಯಾಗದಿರಿ ಬದುಕಿನಲಿ ಗೆಳೆಯರೆ
***
ಹನಿಗಳು
ಕೂಸುಗಳಲ್ಲಿ
ನೂರಾರು ಕನಸಿದೆ
ಕಾಸುಗಳಲ್ಲೂ !
***
ಬುದ್ದಿವಂತೆ
ಒಂದು ಕಡೆ ಗಂಡ
ಇನ್ನೊಂದು ಕಡೆ
ಹಣದ ಚೀಲವಿಟ್ಟು
ಹೆಣ್ಣನ್ನು ಬಿಟ್ಟಲ್ಲಿ
ಮೊದಲು
ಹಣದ ಚೀಲವ
ಪಡೆದು
ನಂತರವೇ
ಗಂಡನ ಕೈ ಹಿಡಿದು
ಮುನ್ನಡೆವಳು
ಸತಿಯು !
***
ಅನುಭವ
ಬದುಕಲ್ಲಿ
ಕತೆಗಳು
ಸೃಷ್ಟಿಯಾಗಲಿ
ನೋಡು
ನೋಡುತ್ತಾ
ಬಾಳೊಂದು
ಕಾದಂಬರಿಯಾಗುತ್ತದೆ !
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್