ಗಝಲ್ ಗಳ ಅದ್ಭುತ ಲೋಕ

ಗಝಲ್ ಗಳ ಅದ್ಭುತ ಲೋಕ

ಕವನ

೧.

ಬಿಟ್ಟಿ ಭಾಗ್ಯವದು ಯಾರಿಗೂ ಬೇಡ ಹೇಳು

ಕಟ್ಟಿ ಇಡುವರು ಕೇರಿಗೂ ಬೇಡ ಹೇಳು

 

ಉಟ್ಟ ಬಟ್ಟೆಯಲೆ ಮನೆ ತೊರೆದೆಯೇಕೆ

ಕೆಟ್ಟು ಇರುವರು ಊರಿಗೂ ಬೇಡ ಹೇಳು

 

ಜಟ್ಟಿ ತಾನೆಂದು ಹೇಳುತಲೆ ತಿರುಗದಿರು

ಕುಟ್ಟಿ ಕೆಡವಲು ಮೋರಿಗೂ ಬೇಡ ಹೇಳು

 

ಹುಟ್ಟಿ ಸಾಯಲು ಹಲವಾರು ಕಾರಣಗಳಿವೆ

ತಟ್ಟಿ ಕುಣಿವವರು ಮಾರಿಗೂ ಬೇಡ ಹೇಳು

 

ಮುಟ್ಟಿ ಬಿಡಲಿಂದು ಭವದಲಿ ನಾನ್ಯಾರು ಈಶಾ

ಕಟ್ಟೆ ಇದ್ದರೂ ಸತ್ತಮರ ದಾರಿಗೂ ಬೇಡ ಹೇಳು

***

ಗಝಲ್ - ೨

 

ಮಾತು ಸೆಳೆದು ಚೆಲುವು ಬೆರೆತು ಮೋಹ ತುಂಬಿ ಸವಿಯಿತು

ಕತೆಯ ಹೇಳಿ ಪ್ರೀತಿಯುಕ್ಕಿ ಮಧುವ ಹೀರಿ ಮೆರೆಯಿತು

 

ಬಂಧವಿರಲು ಚೆಂದದಿಂದ ರಶ್ಮಿ ಕಡಲ ಸೆಳೆಯಿತೆ

ಮದನ ಬಾಹು ಸೆಳೆದ ರೀತಿಯಲ್ಲಿ ತೀರ ನಲಿಯಿತು

 

ಸಂಗ ಭಂಗವಾಗದಿರಲು ಹೊನ್ನ ಕಾಂತಿ ಅರಳಲು

ಸಂದ ದಿನದ ನಲಿವ ನೋಟ ಮುದವ ಕೊಡುತ ಒಲಿಯಿತು

 

ಮುತ್ತು ಕೊಟ್ಟ ಅಧರ ಅಲುಗಿ ಸಗ್ಗ ಲೋಕ ಕಾಣಲು

ಮತ್ತಿನೊಳಗೆ ಹೊತ್ತು ಹೋಗೆ ತುಟಿಯ ಒನಪು ಉಲಿಯಿತು

 

ಮೌನ ಕೂಡ ಖುಷಿಯ ಹೊಂದಿ ಸುಖವ ಪಟ್ಟ ಈಶಾ

ನೋವ ಮರೆತು ಹೃದಯ ಬೆರೆತು ನಡೆದ ಜೀವ ಬೆರೆಯಿತು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ:ಇಂಟರ್ನೆಟ್ ತಾಣ

ಚಿತ್ರ್