ಗಝಲ್ ಗಳ ಜೊತೆ ಹನಿ !

ಗಝಲ್ ಗಳ ಜೊತೆ ಹನಿ !

ಕವನ

ಗಝಲ್ ೧

ಅಲೆಯ ರೂಪದಿ ನಿನ್ನ ಸೆಳೆಯುತ ಮಡಿಲಿನಾಸರೆ ಪಡೆದೆನು

ಚಂದ್ರನಂತೆಯೆ ತಂಪನೀಯುತ ಒಲವಿನಾಸರೆ ಪಡೆದೆನು

 

ಸವಿಯ ಚುಂಬನ ಸೋರಿ ಹೋಗದೆ ಇರಲು ಏನನು ಮಾಡಲಿ

ಕನಸು ಕಳೆಯುತ ಚೆಲುವಿನಾಟದಿ ನನಸಿನಾಸರೆ ಪಡೆದೆನು

 

ಬಾನು ಹೊಳೆಯಲು ಕಣ್ಣಿನೊಳಗಡೆ ಚೆಲುವ ಸಂಭ್ರಮ ಕಂಡಿತೆ 

ಮನಸಿನೊಳಗಡೆ ಖುಷಿಯು ಕಾಣಲು ಉಸಿರಿನಾಸರೆ ಪಡೆದೆನು

 

ಚಿಂತೆ ಮಾಡುತ ಕುಳಿತುಕೊಂಡರೆ ಮೋಹ ಹುಟ್ಟಲು ಸಾಧ್ಯವೆ 

ತನುವಿನಾಳದಿ ಸೇಲೆಯು ಉಕ್ಕಲು ಬೆಸುಗೆಯಾಸರೆ ಪಡೆದೆನು 

 

ಈಶ ಹೃದಯದಿ ಸ್ನೇಹವುಕ್ಕಲು ಸಪ್ನ ಮಂದಿರ ಮುರಿಯದು

ಜೀವ ನದಿಯೊಳು ತಮವು ಕಳೆಯಲು ಪ್ರೀತಿಯಾಸರೆ ಪಡೆದೆನು

***

ಗಝಲ್ ೨

ಬದುಕು ನನ್ನ ಪಾಲಿಗೆ *ಬದಲಾಗಲೇ* ಇಲ್ಲ ಸಖಿ

ನಲಿವು ನನ್ನ ಪಾಲಿಗೆ *ಸವಿಯಾಗಲೇ* ಇಲ್ಲ ಸಖಿ

 

ಕಬ್ಬದು ನನ್ನ ಪಾಲಿಗೆ *ಸಕ್ಕರೆಯಾಗಲೇ* ಇಲ್ಲ ಸಖಿ

ಬತ್ತವು ನನ್ನ ಪಾಲಿಗೆ *ಸಿರಿಯಾಗಲೇ* ಇಲ್ಲ ಸಖಿ

 

ಒನಪು ನನ್ನ ಪಾಲಿಗೆ *ಒಲವಾಗಲೇ* ಇಲ್ಲ ಸಖಿ

ಸುಖವು ನನ್ನ ಪಾಲಿಗೆ *ಗೆಲುವಾಗಲೇ* ಇಲ್ಲ ಸಖಿ

 

ಚಿನ್ನವು ನನ್ನ ಪಾಲಿಗೆ *ಹೊಳಪಾಗಲೇ* ಇಲ್ಲ ಸಖಿ

ರನ್ನವು ನನ್ನ ಪಾಲಿಗೆ *ಚೆಲುವಾಗಲೇ* ಇಲ್ಲ ಸಖಿ

 

ಈಶನು ನನ್ನ ಪಾಲಿಗೆ *ದೇವನಾಗಲೇ* ಇಲ್ಲ ಸಖಿ

ಜೀವನ ನನ್ನ ಪಾಲಿಗೆ *ಬೆಳಕಾಗಲೇ* ಇಲ್ಲ ಸಖಿ

***

ದೃಷ್ಟಿ ಬೊಟ್ಟು

ಪ್ರತಿಯೊಂದು

ವಿಷಯದಲ್ಲೂ 

ಇದೆ ,ಆಗಿದೆ 

ಇದಿಷ್ಟೇ 

ಇಲ್ಲಿಯವರೆಗೂ 

ಧ್ವನಿ ಇಲ್ಲದವರ ಬಗ್ಗೆ

ನಡೆದುಕೊಂಡು 

ಬಂದಂತಹ 

ಸೂತ್ರಗಳು ... 

ನಮ್ಮ ಕಾನೂನುಗಳು

ಸಾಕ್ಷಿಗಳಿಲ್ಲದೇ 

ತಿಜೋರಿಗಳಲ್ಲೇ 

ಭದ್ರವಾಗಿ ಕುಳಿತಿವೆ!

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್