ಗಝಲ್ ಗಳ ದುನಿಯಾ !
೧.
ತರಂಗಗಳ ದುಡಿಸು ಹುಚ್ಚುಗಳ ಹಿಡಿಸು ಮನವೆ
ದುಃಖಗಳ ಓಡಿಸು ಸುಖವನು ಇಡಿಸು ಮನವೆ
ತನುವುಗಳ ತೊಡಿಸು ಎನಗೆ ಹೊಸತು ಕಾಣದು
ಶಿಖರಗಳ ನುಡಿಸು ಸಿಕ್ಕುಗಳ ಸುಡಿಸು ಮನವೆ
ಕಾಮನೆಗಳ ಜೋಡಿಸು ನನ್ನಲ್ಲಿ ಏನನ್ನು ಕಂಡೆಯೊ
ತಾಮಸಗಳ ಆಡಿಸು ಕೊನೆಯಲ್ಲಿ ಕಾಡಿಸು ಮನವೆ
ಮುತ್ತುಗಳ ಕೂಡಿಸು ಕಡಲಿನಲ್ಲಿ ಉಬ್ಬರವಿದೆ ನಿಜವೆ
ಮತ್ತುಗಳ ಬಾಡಿಸು ಜೊತೆಯಾಗಿ ಕುಡಿಸು ಮನವೆ
ಪ್ರೀತಿಗಳ ಮುಡಿಸು ಪ್ರೇಮವದು ಸಿಗುವುದೇ ಈಶಾ
ಕನಸುಗಳ ಹಾಡಿಸು ನನಸುಗಳ ಮುಡಿಸು ಮನವೆ
.***
೨.
ಬಾನ ಸುಂದರ ಚಿತ್ರ ಲೋಕವು ನೀನು ಕೊಡುವ ಮುತ್ತುವು
ಜೀವ ಪಾಠವು ಚೆಲ್ಲಿ ಸಾಗಿದೆ ನಾನೆ ನೀಡುವ ಮುತ್ತುವು
ಹುಟ್ಟು ಚೆಲುವಿನ ಪಾತ್ರ ಸೋರಿತೆ ಮತ್ತು ಕರಗಿದ ರೀತಿಗೆ
ಗಟ್ಟಿ ಕುಳವದು ಸೋತು ಹೋಗಲು ಮತ್ತೆ ಕಾಡುವ ಮುತ್ತುವು
ಹಟ್ಟಿ ಕರುವದು ತಾಯ ಬಳಿಗದು ಹೇಗೆ ಓಡಿತು ನೋಡೆಯ
ತಟ್ಟಿ ಮೇಲಣ ಹನಿಯ ಶಬ್ದಕೆ ಕುಣಿದು ಹಾಡುವ ಮುತ್ತುವು
ಗಾನ ಸುಂದರ ಒಲಿದ ರಾಗವು ಇಂದು ಎಲ್ಲಿಗೆ ಹೋಯಿತೊ
ದಾನ ಮಾಡುವ ಕೈಯು ಎಲ್ಲಿದೆ ಕರೆದು ಬೇಡುವ ಮುತ್ತುವು
ಸೋತು ಸುಮ್ಮನೆ ಕುಳಿತೆ ಏತಕೆ ನನ್ನ ಒಲವಿನ ಈಶಾ
ಘಾತ ಜೀವನ ಬೇಡವಾಗಿದೆ ಸೋತು ಓಡುವ ಮುತ್ತುವು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ