ಗಝಲ್ ಗಳ ದುನಿಯಾ...

ಗಝಲ್ ಗಳ ದುನಿಯಾ...

ಕವನ

ಗಝಲ್ ೧

ಯಾರು ಬರ್ತೀರೋ ಬರೋದಿಲ್ವೋ ನಾನಂತೂ ಬರ್ತೀನಿ

ಯಾರು ಇರ್ತೀರೋ ಇರೋದಿಲ್ವೋ ನಾನಂತೂ ಬರ್ತೀನಿ

 

ಸಭೆಗಳು ಜನ ತುಂಬ್ಸೋಕೆ ಇರ್ವ ಬಸ್ಸಲ್ಲ ತಿಳಿತಾ

ಅತಿರಥ ಮಹಾರಥರು ಸೇರೋದಿಲ್ವೋ ನಾನಂತೂ ಬರ್ತೀನಿ

 

ನನಗಂತೂ ವಾಲಗ ಸ್ವಾಗತ ಯಾವುದೂ ಬ್ಯಾಡ್ರಿ

ಮೈಕಾ ಇಲ್ಲದಿದ್ದ್ರೂ ನಡೆಯೋದಿಲ್ವೋ ನಾನಂತೂ ಬರ್ತೀನಿ

 

ಆಸಕ್ತರು ಹಿತೈಷಿಗಳು ಬರ್ಲೇ ಬೇಕೆಂಬ ನಿಯಮ ಇಲ್ರಿ

ಬೇರ್ಯಾರೂ ಬರದಿದ್ದ್ರೂ ಪಕ್ಷಿಗಳಿರೋದಿಲ್ವೋ ನಾನಂತೂ ಬರ್ತೀನಿ

 

ಒಳ್ಳೆಯ ಕವಿ ಸಾಹಿತಿ ಹಾಡುಗಾರ ಸಕಲ ಕಲಾವಲ್ಲಭ ಈಶಾ

ಮನಸಿನಲ್ಲೇ ಇಟ್ಟುಕೊಂಡು ಕೊರಗೋದಿಲ್ವೋ ನಾ‌ನಂತೂ ಬರ್ತೀನಿ

***

ಗಝಲ್ ೨

-------------

ಹಸಿರು ತುಂಬಿದ ಭೂಮಿಯ ನೋಡಿದೆ ಸಾಕಿ

ಕೆಸರಲಿ ಅರಳಿದ ತಾವರೆಯ ಕಾಡಿದೆ ಸಾಕಿ

 

ಅವಸರ ಎನಿಸುವ ಬದುಕಲಿ  ಹೇಳು ಏನಿದೆ

ಕನಸು ಸೇರುತ ನನಸದು ಮೂಡಿದೆ ಸಾಕಿ

 

ಚಿಂತೆ ಹರಿಸುವ ಸರಕದು ಬರದಿರಲಿ ಕಡೆಗೆ

ಚಿಂತನೆಗೆ ಮನ ಸಾಗಲಿ ಬೇಡಿದೆ ಸಾಕಿ

 

ಮಹಡಿಯಲಿ ನಿಂತು ನಲಿದೆ ಕಣ್ಣ ಮಿಟುಕಿಸಿ

ಮೋಹ ತುಂಬುತ ಹೃದಯದಿ  ಓಡಿದೆ ಸಾಕಿ

 

ತನುವಲಿ ತುಂಬುತ ಎಲ್ಲಿಗೂ ಹೋಗದಿರು ಈಶಾ

ಇಷ್ಟವಾದರೆ ಇದ್ದುಬಿಡು ಪ್ರೀತಿ ನೀಡಿದೆ ಸಾಕಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್