ಗಝಲ್ ಗಳ ಮೋಹಕ ಲೋಕ...

ಗಝಲ್ ಗಳ ಮೋಹಕ ಲೋಕ...

ಕವನ

ನೆನಪುಗಳು ಮನದಿಂದ ಆರಬಹುದು  ಪ್ರೀತಿಸಿದ ದಿನಗಳು ಮಾಸಬಹುದೆ

ಚಿಂತೆಗಳು ಎಲ್ಲೆಂದರಲ್ಲಿ ಕಾಣಿಸಬಹುದು ಚಿಂತನೆಯ ರಶ್ಮಿಗಳು ಮಾಸಬಹುದೆ

 

ನಿಜವೆನ್ನುವ ಸಹನೆಯಲ್ಲಿಯೂ  ಕೆಲವೊಮ್ಮೆ ಕೋಪವದು ಬರುವುದಲ್ಲ ಯಾಕೆ

ಆತುರದೊಳು ಓಡಿದರೆ ಜಾರುವವನ ನೋವಿನ ಮಾತುಗಳು ಮಾಸಬಹುದೆ

 

ವಿಚಿತ್ರವಾದರೂ ಸತ್ಯವಿದು ಎನ್ನುವವನ ತಲೆಯದು ಮಣಭಾರವಂತೆ ಹೌದೆ

ಚಿತ್ತದೊಳಗಿನ ಸತ್ವಗಳ ಅರಿಯಲಾರದೆ ಇರುವವನ ಸಾಧನೆಗಳು ಮಾಸಬಹುದೆ

 

ಹಚ್ಚಲಾರದ ದೀಪಗಳ ನಡುವಿನಲ್ಲಿ ಓಡಾಡುವೆನೆಂದರೆ ನನಗೆ ಹುಚ್ಚಲ್ಲವೆ

ಚುಚ್ಚದಿರುವ ದಿನಗಳ ಬಗ್ಗೆಯೇ ನೆನಪಿಸಿಕೊಂಡ ಹೃದಯಗಳು ಮಾಸಬಹುದೆ

 

ಮಹಡಿಯ ಮನೆಯಲ್ಲಿದ್ದೆ ಎನ್ನುವ ಕಲ್ಪನೆಯನ್ನೇ ಮರೆತಿರುವನು ಈಶಾ

ಗೊತ್ತಿರದಂತಹ ನೆಲದ ಮೇಲೆಯೆ ಮಲಗುತ್ತಲೇ ಕನಸುಗಳು ಮಾಸಬಹುದೆ

***

೨.

ಭಾವನೆಯು ಮನದೊಳಗೆ ಮೂಡದೆಲೆ ಕವಿಯೊಬ್ಬ ಬೆಳೆಯುವನೆ

ಮೌನದಲಿ ಇರುವವರ ಮಾತುಗಳ ಪಡದೊಬ್ಬ ಬೆಳೆಯುವನೆ

 

ಕಾನನದ ಒಳಹೊಕ್ಕು ಭಜನೆಯನು ಮಾಡಿದರೆ ಫಲವೇನು

ಜೀವನದ ದಾರಿಯೊಳು ಹಾಗೆಯೇ ನಡೆದೊಬ್ಬ ಬೆಳೆಯುವನೆ

 

ಸೀನದೆಯೆ ಬರುವುದೇ ಬಲ್ಲೆಯಾ ಕಫತಾಪ ಒಳಗಿಂದ

ತನುವೊಳಗೆ ಚೆಲುವದು ಮೂಡಿರಲು ಮಗದೊಬ್ಬ ಬೆಳೆಯುವನೆ

 

ಮದವೇರೆ ಆನೆಯನು ತಹಬದಿಗೆ ತರಬಹುದೆ ಹೇಳುವೆಯ

ಮುನಿಯುತಲೆ ಬಾಳಿದರೆ ನಿನ್ನೊಡನೆ ಜೊತೆಗೊಬ್ಬ ಬೆಳೆಯುವನೆ

 

ದ್ವೇಷವನು ಬಿಟ್ಟಿರಲು ಈಶನೇ ಬಂದಿಹನು ಕಾಣೆಯಾ

ಗೆಲುವುಗಳ ನಡುವೆಯೂ ಸೋಲಿನೊಳು ಇನ್ನೊಬ್ಬ ಬೆಳೆಯುವನೆ

 

- ಹಾ ಮ ಸತೀಶ, ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್