ಗಝಲ್ ಗಳ ಲೋಕದಲ್ಲಿ ಪಯಣ

ಗಝಲ್ ಗಳ ಲೋಕದಲ್ಲಿ ಪಯಣ

ಕವನ

೧.

ಕಾಲನ ಹೊಸ್ತಿಲಲ್ಲಿದ್ದರೂ ಅತ್ತವರು ಯಾರಿಲ್ಲ ವಿಧಿಯೆ 

ಜೀವನದ ಪಾಠವನು ಕಲಿತರೂ ಅನ್ಯರು ಸೇರಿಲ್ಲ ವಿಧಿಯೆ

 

ಉಂಡಮನೆಗೆಲ್ಲವನು ಸುರಿದರೂ ನೋಡುವವರೇ ಇಂದಿಲ್ಲವಿಲ್ಲಿ

ಹೃದಯ ಹಿಂಡಿದ ತನುವು ನೋವಾದರೂ ಯಾರಿನ್ನು ಕೇಳಿಲ್ಲ ‌ ವಿಧಿಯೆ

 

ಆಶ್ರಯದ ಜಲವನ್ನು ಕುಡಿದರೂ ಬದುಕಾಚೆ  ನೋಡುತ್ತಲಿಹರು

ಆಶ್ರಮದ ಹೊರಗಡೆ ನಿಂತರೂ ಕರೆವವಗೆ ಬೇಕಿಲ್ಲ ವಿಧಿಯೆ

 

ಚಿಂತೆಗಳ ಸುಳಿಯಲ್ಲಿ  ಸಿಲುಕಿದರೂ ಚಿಂತನೆಯು ಬರದಾಯ್ತುಯಿಂದು

ಉಡುವ ಬಟ್ಟೆಯ ತೊಟ್ಟು ಹೊರಟಿದ್ದರೂ ಹೊರಗಿನಾಟವೇ ಸಿಕ್ಕಿಲ್ಲ ವಿಧಿಯೆ

 

ಏಳುಬೀಳಿನ ಕೊನೆಗೆ ಒಬ್ಬಂಟಿಯಾದರೂ ನಾನಿಂದು ನಿನ್ನ ಜೊತೆ ಈಶಾ

ಕಾಲ ಹತ್ತಿರ ಬಂದು ನಿಂತರೂ ತಿಳಿದವರು ಕಚ್ಚಿಲ್ಲ ವಿಧಿಯೆ

***

೨.

ಹರಸಿ ಸಾಗಿರಿ ಹಿರಿಯರೆಲ್ಲರು ಬದುಕ ಕಟ್ಟಿಹ ಒಲವೊಳು

ನಮಿಸಿ ಬಾಗಿರಿ ಕಿರಿಯರೆಲ್ಲರು ಉಸಿರ ತಟ್ಟಿಹ ಒಲವೊಳು

 

ಕೊಳೆಯ ತೊಳೆಯುತ ಸಾಗಿರೆಲ್ಲರು ಮತ್ತೆ ಸಂಶಯವೇತಕೋ

ವಿಷಯ ಕಲಿಯುತ ಬಾಳಿರೆಲ್ಲರು ಜ್ಞಾನ ಇಟ್ಟಿಹ ಒಲವೊಳು

 

ನಶೆಯ ಹೊಂದದೆ ಬದುಕಿರೆಲ್ಲರು ಪಯಣ ಇರುವುದೇತಕೇ

ವಶಕೆ ಸಿಗದೆಲೆ ದುಡಿಯಿರೆಲ್ಲರು ಬದುಕ ಕೊಟ್ಟಿಹ ಒಲವೊಳು

 

ಕನಸ ದೇಶದಿ ಕಾಣಿರೆಲ್ಲರು

ನನಸು ಬರದೇ ಇರುವುದೇ

ಹಸಿರ ಲೋಕದಿ ಹಾಡಿರೆಲ್ಲರು ಹುರುಪು ಹುಟ್ಟಿಹ ಒಲವೊಳು

 

ಮನದಿ ಈಶನ ನೋಡಿರೆಲ್ಲರು ಭವದ ಸುತ್ತಲು ಸವಿಯಿದೆ

ಮನೆಯ ಒಳಗಡೆ ಮಲಗಿರೆಲ್ಲರು

ಬಯಕೆ ನೆಟ್ಟಿಹ ಒಲವೊಳು

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್