ಗಝಲ್ ಜೊತೆ ಒಂದಿಷ್ಟು ಹನಿಗಳು...

ಗಝಲ್ ಜೊತೆ ಒಂದಿಷ್ಟು ಹನಿಗಳು...

ಕವನ

ಬರವಣಿಗೆ ಕನ್ನಡದಲ್ಲಿರಲಿ ವಿಕೃತಿ ಬೇಕೆ

ಮಾತುಗಳು ಸ್ಪಷ್ಟವಾಗಿರಲಿ ವಿಕೃತಿ ಬೇಕೆ

 

ಕತ್ತೆಗಳೂ ಏಕೆ ಒದೆಯುತ್ತಲಿವೆ ಹಿಂಗಾಲಿನಿಂದ

ವ್ಯವಹಾರಗಳೆಂದೂ ಹಿಡಿತದಲಿರಲಿ ವಿಕೃತಿ ಬೇಕೆ

 

ಜೀವನದಲ್ಲಿ ಮುಗಿಯದ ಪಯಣಗಳ ದಾರಿಯಿದೆ

ಜೀತಗಳಿಗೆಂದೂ ತಲೆಯೊಡ್ಡದಿರಲಿ ವಿಕೃತಿ ಬೇಕೆ

 

ಒಳಗಿನ ಒಪ್ಪಂದಗಳು ಸುಖದಲಿ ಅಂತ್ಯ ಕಾಣಲಿ

ಬೋಧನೆಗಳೆಂದೂ ಹೇಗೆಯೆಯಿರಲಿ ವಿಕೃತಿ ಬೇಕೆ

 

ಜಾತಿ ವಿಜಾತಿಗಳ ವಿಂಗಡನೆಗಳು ಸಾಕೇ ಈಶಾ

ಉಪಮೆಗಳನೆಂದೂ ಕೊಡದಿರಲಿ ವಿಕೃತಿ ಬೇಕೆ

***

ಹನಿಗಳು

 

ತರ್ಕಗಳಲ್ಲೆ

ಸುಖವಿದೆಯೆಂದರೆ

ಅನುಭವಿಸು !

 

ನಿಷ್ಠುರ ವಾದ

ಸುತ್ತಲೆಲ್ಲ ಇದ್ದಾಗ

ಬೆಂಕಿಯ ಗೂಡು !

 

ಹಾಡ ಬೇಕಲ್ಲ

ನನ್ನದೆಯ ರಾಗಕ್ಕೆ

ನಿನ್ನದೇ ತಾಳ !

 

ಭಯವದುವು

ತುಂಬಿರಲು ಸುತ್ತಲೂ

ಕತ್ತಲೆಯಂತೆ !

 

ಚಿಗುರುಗಳು

ರುಚಿಯಾಗಿರುತ್ತದೆ

ಕಹಿಯ ಜೊತೆ !

 

ಜೀವನದಲ್ಲಿ

ಯೋಗವಿದ್ಯೆಯಿದ್ದರೆ

ಆರೋಗ್ಯ ಭಾಗ್ಯ !

 

ಉಪದೇಶವು

ನಮ್ಮ ದೇಶದ ಆಸ್ತಿ

ಧರ್ಮಾರ್ಥವಾಗಿ !

 

ತಪ್ಪುಗಳಲ್ಲಿ

ಸುಖವದುವು ಬೇಡ

ಕತೆಯಾಗದೆ !

 

ಮನೆಯೊಳಗೆ

ಮೌನವು ತುಂಬಿದರೆ

ಯೋಗಿ ಬರುವ !

 

ಕವಿಯಾಗಲು

ಕಲಿತು ಬರೆ, ಇಲ್ಲ

ಚೋರನಾಗುವೆ !

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್