ಗಝಲ್ ದುನಿಯಾ...

ಗಝಲ್ ದುನಿಯಾ...

ಕವನ

ಪ್ರೀತಿ ಹೊಮ್ಮಿದಾಗ ಒಲವಿನೊಳಗೆ ಮಜವು ಗೆಳತಿ

ಗೆಳೆಯ ಬಂದು ಸೇರಿದಾಗ ಮನಕೆ ನಿಜವು ಗೆಳತಿ

 

ಕಾಣದಿರುವ ಮೌನದಲ್ಲಿ ಕೊರತೆ ಇಹುದೆ ಹೇಳು

ಅತ್ತು ಕರೆದು ಬೇಡಿದರೂ ಮತ್ತೆ ಸಜವು ಗೆಳತಿ

 

ಉಸಿರ ಹಸಿರು ಸನಿಹ ಎನಲು ಕನಸು ದೂರವೇಕೆ

ಒಡಲಿನೊಳಗೆ ಇಣುಕಿ ನೋಡೆ ಹೀಗೆ ವಜವು ಗೆಳತಿ

 

ನೀರಿನಾಟ ಚೆಂದವೆಂದು ಇಳಿದು ನೋಡಬಹುದೆ

ಚಿಂತೆಯಿರಲು ನನಸು ಬರದು ದಾರಿ ಗಜವು ಗೆಳತಿ

 

ಜೀವ ಬರಡು ಆಗದಿರಲು ಚಿತ್ರವಿರಲಿ ಈಶ

ಭಾವ ಹೊತ್ತು ಸಾಗಲಿಂದು ಇರಲಿ ಭುಜವು ಗೆಳತಿ

***

ಗಝಲ್-೨

ನೀರೊಳಗಿನ ಮೊಸಳೆಯ ಸಂಚು ಬೇಡ ಬಾಳಲಿ

ಧರೆಯೊಳಗಿನ ನರಿಯ ಹೊಂಚು ಬೇಡ ಬಾಳಲಿ

 

ಕಾಸರ್ಕದಲ್ಲಿರುವ ಕಾಯಿಯ ವಿಷದಂತೆ ಬದುಕ ಬೇಕೆ

ಕತ್ತರಿಸಿರುವ ತುಂಡು ಬಂಡೆಯ  ಅಂಚು ಬೇಡ ಬಾಳಲಿ

 

ತಾಯಿಬೇರು ಇಲ್ಲದೇ ಒಣಗಿರುವ ಮರದಂತೆ ಇರಬೇಕೆ

ಅಗ್ನಿ ಜ್ವಾಲೆಗೆ ಸಿಲುಕಿದ ಬಿಸಿಯ ಹೆಂಚು ಬೇಡ ಬಾಳಲಿ

 

ಮಂದಿರದ ಒಳಗೆಯೆ ನೆಮ್ಮದಿಯು ಸಿಗಲಾರದೆ ಈಶಾ

ಕಲಾಯಿ ಹೋಗಿರುವ ಪಾತ್ರೆಯ ಕಂಚು ಬೇಡ ಬಾಳಲಿ

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್