ಗಝಲ್ ನೆನಪುಗಳು…

ಗಝಲ್ ನೆನಪುಗಳು…

ಕವನ

೧.

ಮನದ ಕಿಟಿಕಿಯದು ಮುಚ್ಚಿಹುದು

ತನುವ ಬಾಗಿಲೊಳು ರೊಚ್ಚಿಹುದು

 

ವಿಷವೇರಿದ ಕಣ್ಣುಗಳು ನೀಲಿಗಟ್ಟಿವೆ

ಸುಡದಿರುವ ಬಿಸಿಲಲು ಕೆಚ್ಚಿಹುದು

 

ರಾತ್ರಿಯ ಕನಸುಗಳಲ್ಲಿ ನನಸಿಲ್ಲವು

ಮಲಗಿರುವ ಹಾಸಿಗೆಯು ಚುಚ್ಚಿಹುದು

 

ತಂಪಾದ ಕೋಣೆಯದು ಬೆವರುತ್ತಿದೆ

ಬಯಕೆಯಿರದ ಬಂಧನಕು ಹುಚ್ಚಿಹುದು

 

ಈಶನ ಹೃದಯದಾಳವು ಚಂಚಲವಾಗಿದೆ

ರೂಪವಿಲ್ಲದ ಜೀವಾತ್ಮವು ಬೆಚ್ಚಿಹುದು

***

೨.

ನೀನಿರಲು ಗೆಲುವದು ಬಾರದೆ ಹೇಳು 

ನಾನಿರಲು ಮನವದು ತಾರದೆ ಹೇಳು 

 

ನೆಲೆಯಿರಲು ತನುವದು ಸಾಗದೆ ಹೇಳು 

ಒಣಗಿರಲು ಮರವದು ಬೀಳದೆ ಹೇಳು 

 

ಭವವಿರಲು ಗುಣವದು ಬೀರದೆ ಹೇಳು 

ಮಧುವಿರಲು ಒಲವದು ಸೇರದೆ ಹೇಳು 

 

ಛಲವಿರಲು ಹಟವದು ಕಾಣದೆ ಹೇಳು 

ಸುಖವಿರಲು ಅರಿವದು ಮೂಡದೆ ಹೇಳು 

 

ಸವಿಯಿರಲು ಸಿಡುಕದು ಹೋಗದೆ ಹೇಳು 

ಕನಸಿರಲು ನನಸದು ತೀರದೆ ಹೇಳು 

***

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್