ಗಝಲ್ ಪಯಣ...

ಗಝಲ್ ಪಯಣ...

ಕವನ

ತಪ್ಪು ತೋರಿಸಬೇಡ ಇನ್ನೊಬ್ಬರ ನಿನ್ನೊಳಗೇ ಇರಬಹುದು ನೋಡು

ಕಪ್ಪು ಅವನೆಂದು ಜರಿಯದಿರು ತನುವೊಳಗೇ ಕಾಣಬಹುದು ನೋಡು

 

ಬೆಪ್ಪನಂತೆ ಆಗುವೆ ಹೀಗೆಯೇ ಇತರರನು ಬೈಯುತ್ತಾ ಹೋದರೆ

ಕಪ್ಪೆಯಂತೆ ಜಿಗಿದರೆ ನೀನಿಂದು ಅವಸರದಿ ಓಡಬಹುದು ನೋಡು

 

ಯಾರನ್ನೂ ದೂರದಿರು ಮನೆಯೊಳಗೆ ಹತ್ತಿರದಿ ಕೈಹಿಡಿಯುವವರ ಕಾಣು

ನೀನೇನು ಮಾಡಿದರು ಅದುವೇ ಹೃದಯವನು ನುಂಗಬಹುದು ನೋಡು

 

ಬೇರೊಬ್ಬರ ಬದುಕಿಗೆ ವಿಷವುಣಿಸುತ್ತ ಬೆಳಕ ದಾರಿಯಲಿ ಸಾಗುವಿಯೇನು

ಮನದುಬ್ಬರ ದೌರ್ಬಲ್ಯಗಳು ಕೊನೆಗೊಮ್ಮೆ ಬಾಳನ್ನೇ ಹಿಂಡಬಹುದು ನೋಡು

 

ಗೆಜ್ಜೆಗಳ ದನಿಗಳಿಗೆ ಬಳಿಯದಿರುಬಣ್ಣ ಉಸಿರದುವೇ ಅಡಗೀತು ಸವಿಯೆ

ಹಜ್ಜೆಗಳ ಪಿಸುಮಾತಿಗೆ ತಲೆಬಾಗಿದರೆ ರಶ್ಮಿಯದು ಮೂಡಬಹುದು ನೋಡು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್