ಗಝಲ್ ಪ್ರಪಂಚ

ಗಝಲ್ ಪ್ರಪಂಚ

ಕವನ

ನೆನಪದು ಕುಸಿದಿದೆ ಕನಸದು ಬೀಳದ ಹಾಗೆ

ಮನವದು ಸೊರಗಿದೆ ಪ್ರೀತಿಯು ಹಾಡದ ಹಾಗೆ

 

ಬಾನಲಿ ತೇಲುವ ಮೋಡವು ಕರಗದೆ ಹೇಳು

ಮೋಹದ ಚೆಲುವಿನ ತಾರೆಯ ರೂಪದ ಹಾಗೆ

 

ಸುಮಧುರ ತುಂಬಿದ ಪಾತ್ರೆಯು ಸೋರಿತೆ ನೋಡು

ಕಂಡಿಹ ಚಿತ್ರದಿ ಬಣ್ಣವು ಮಾಸಿದ ಹಾಗೆ

 

ಜೀವನ ಪಾವನ ಲಯದಲಿ ಕಾಣದೆ ಬೆಳಕು

ಭಾವನೆ ಸೃಷ್ಟಿಯ ಸೊಬಗದು ತೀರಿದ ಹಾಗೆ

 

ನೋಟದ ಅರ್ಥವು ತಿಳಿಯದೆ ಸೋತನೆ ಸವಿಯು

ಅಂತರ ಪರದೆಯ ಒಳಗಿನ ಬಿಂಬದ ಹಾಗೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್