ಗಝಲ್ ಮತ್ತು ಹನಿಗಳು

ಗಝಲ್ ಮತ್ತು ಹನಿಗಳು

ಕವನ

ನಾನು ಸೇವಕನಲ್ಲ ತಿಳುವಳಿಕೆಯ ನಡುವೆಯೇ ಗುಲಾಮನಂತೆ ಅಲ್ಲವೇ 

ನೀನು ದಬ್ಬಾಳಿಕೆಯ ಮಾಡುವ ವರ್ಗದ ಪ್ರಭುವಿನಂತೆ ಅಲ್ಲವೇ

 

ಕುತ್ತಿಗೆಯನ್ನು ಹಿಚುಕುತ್ತಾ ಬಂಧಿಸಿ ಒಯ್ಯುವ ಕಾಲವು ಮುಗಿಯಿತೆ

ಪ್ರಜಾಪ್ರಭುತ್ವದ ನಡೆಯೊಳಗೆ ನೆರೆತವರ ಕಡೆಯ ಮಾತಿನಂತೆ ಅಲ್ಲವೇ 

 

ಕಾಲಿಗೆ ಕಂಡದ್ದನ್ನು ಕಟ್ಟಿಸುವ  ಕಾಲವದು ಮುಗಿಯುತ್ತಾ ಹೋಯಿತೇ

ಉಪ್ಪರಿಗೆಯ ಮೇಲಿನಿಂದ  ಬೀಳುವ ವಸ್ತುಗಳು ತಿರುಕನಂತೆ ಅಲ್ಲವೇ 

 

ಎಷ್ಟು ದುಡಿದರು ಹಳಸಿದ ಅನ್ನವ ತಿನ್ನುವ ಕಾಲವೊಂದಿತ್ತು

ಹೊಟ್ಟೆಯು ಹಸಿದಿದ್ದರೂ ಕೈಯನ್ನು ಒಡ್ಡುವ ಮನಸ್ಸಿನಂತೆ ಅಲ್ಲವೇ 

 

ಕಾರ್ಮಿಕರುಯಿಂದು ನಾಯಕರ ದಯೆಯಿಂದ ಎಚ್ಚರ ಆಗಿದ್ದಾರೆ ಈಶಾ

ಮೌಲ್ಯಗಳನ್ನು ಮತ್ತೊಮ್ಮೆ ಪಡೆಯಲು ಹೊರಟಿದ್ದು  ಸಿಡಿಲಿನಂತೆ ಅಲ್ಲವೇ 

***

ಒಡೆಯ

ಕವಿಯಾದವನು 

ಸರ್ವ ಸಂಗತಿಗಳ

ಒಡೆಯನಾಗಿದ್ದರೆ 

ಮಾತ್ರ ?

ಅವನು ಬರೆದ 

ಕಾವ್ಯವೂ ಕೂಡ

ಸಂಪನ್ನವಾಗಿರುತ್ತದೆ !

***

ಬೇಡವೆಂದರೂ

ಗಂಡು ಹೆಣ್ಣಿನ 

ಬದುಕಿನಲ್ಲಿ

ಮದುವೆಯೆನ್ನುವುದು

ಮರು ಜನ್ಮವಿದ್ದಂತೆ !

ಮದುವೆಯ ಮೊದಲು

ಹೇಗಿರುತ್ತೀರೋ ? 

ಯಾರೂ ಕೇಳರು!

ನಂತರ,

ಎಲ್ಲರೂ ಕೇಳುವವರೆ 

ನಿಮ್ಮ ಬದುಕಿನೊಳಗೆ

ಬೇಡವೆಂದರೂ ಬರುವವರೆ ! 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್