ಗಝಲ್ ಮತ್ತು ಹನಿಗಳು
ಕವನ
ಗಝಲ್
ಮಧುರ ಭಾವವೇ ಕೊಚ್ಚಿತೆ ಗೆಳತಿ
ಮನದ ಕಾಮವೇ ಚಚ್ಚಿತೆ ಗೆಳತಿ
ಮೌನವು ಇಲ್ಲದೆ ಚಿಂತೆಯು ಇಹುದೆ
ಕಾಣದ ಕನಸೇ ಚುಚ್ಚಿತೆ ಗೆಳತಿ
ಪ್ರೀತಿಯು ಮೈಯಿಗೆ ಬೀಗವು ಬಿದ್ದಿತು
ಪಾಠಕೆ ಪ್ರೇಮವೇ ಬೆಚ್ಚಿತೆ ಗೆಳತಿ
ಬೆಳ್ಳನೆ ಹೊಳಪು ಬಾನೊಳು ಎಲ್ಲಿದೆ
ಚಂದ್ರನ ಮೋಡವೇ ಮುಚ್ಚಿತೆ ಗೆಳತಿ
ಈಶನು ಸನಿಹ ಬಾರದೆ ಹೋದನೆ
ತನುವ ಮೋಹವೇ ಕಚ್ಚಿತೆ ಗೆಳತಿ
***
ಹನಿಗಳು
ಬರಹಗಾರ
ನೆಟ್ಟಗಿದ್ದರೆ ತಾನೆ
ಓದು ನೆಟ್ಟಗೆ !
ಚಪ್ಪರಿಸದೆ
ಉಣದಿರೆ ಸ್ವಾದವೆ
ಬರಿದೆ ಸಪ್ಪೆ !
ಬಸಿರಾದಳು
ಬೇಡವೆಂದು ಗೀಚಿದ
ಕವನದಂತೆ !
ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್