ಗಝಲ್ (ಮುರದ್ದಫ್)
ಕವನ
ಸುತ್ತ ಮುತ್ತಲು ಕಪ್ಪು ಕತ್ತಲೆಯೆ ತುಂಬಿದೆ ಗೆಳೆಯಾ
ಅತ್ತ ಇತ್ತಲು ಒಪ್ಪ ಹಿಡಿತವೆ ಕಂಡಿದೆ ಗೆಳೆಯಾ
ಮಲ್ಲಿಗೆಯ ಬನದಲ್ಲಿ ಕಂಪ ಪರಿಮಳ ಹರಡದೆ ಇದ್ದೀತೆ
ಮೆಲ್ಲಗೆ ಹತ್ತಿರ ಪ್ರೀತಿ ಓಡುತ ಬಂದಿದೆ ಗೆಳೆಯಾ
ಹಿಮ ತುಂಬಿದ ನೆಲದಲಿ ತಂಪಿನೊಲವು ಪಸರಿದೆ ನೋಡು
ಉಸಿರು ಹಸಿರಿನ ಚೆಲುವಿನೊಳು ಒಲವು ನಿಂತಿದೆ ಗೆಳೆಯಾ
ಬಾನು ಬುವಿಯಂತೆ ನನ್ನವರ ಒಡನಾಟ ಹೀಗೆಯೇ ಸಾಗಲಿ
ಕೈಹಿಡಿದ ನನಸದುವು ಸವಿ ಹಿತವನು ತಂದಿದೆ ಗೆಳೆಯಾ
ಮನದೊಳಗೆ ಹೊಸ ಬಗೆಯ ತುಂಬಿ ಸಾಗಿದ ಈಶಾ
ಹಳೆಯ ಕೊಳಕಿನ ನಡೆಯು ಮೆಲ್ಲನೆ ಕಂತಿದೆ ಗೆಳೆಯಾ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
