ಗಝಲ್ ವಿಶ್ವ !

ಗಝಲ್ ವಿಶ್ವ !

ಕವನ

೧.

ಹೊಸನಗುವು ಮುಖದಲ್ಲಿ ಯಾವತ್ತೂ ಚೆಂದ ಉಳಿವುದೇ ಗೆಳತಿ

ಹಳೆಯದಕೆ ಖುಷಿಯಿದೆಯೆ ಜೀವನದಿ ಮತ್ತೆ ಅಳಿವುದೇ ಗೆಳತಿ

 

ಸಾಗರದ ಅಲೆಯೊಳಗೆ ಕೋಪ ಏತಕೆಯಿಂದು ಹೇಳ ಬಹುದೇ

ಜೀವನದ ಕನಸೊಳಗೆ ಮನ ಪರಿವರ್ತನೆ ಇರುವುದೇ ಗೆಳತಿ

 

ನನಸಿನೊಳು ಸಾಗದಿರೆ ಬಾಳ ಒಲುಮೆಯು ಸವಿಯಾಗ ಬೇಕೆ

ಧನವೆಲ್ಲ ಬರಿದಾಗೆ ಸಾವು ಸನಿಹಕೆ ಬರುವುದೇ ಗೆಳತಿ

 

ಬಾಡಿರುವ ಹೃದಯದೊಳು ಮೋಹ ಯಾವತ್ತೂ ಕಾಣುವುದೇ ಹುಡುಕು

ನಡುಗುತಿಹ ತನುವಿಂದ ಪ್ರೀತಿಯ ಪದಗಳು ಸಿಗುವುದೇ ಗೆಳತಿ

 

ನೊಂದಿರುವ ಆತ್ಮ ಸಖಿ ಎಲ್ಲಿಹಳೋ ನೋಡಿರುವೆಯಾ ಈಶಾ

ಕಾರಣವು ಇಲ್ಲದೆಯೇ ಉಸಿರು ಹಾಗೆಯೆ ನಿಲುವುದೇ ಗೆಳತಿ

***

೨.

ಚೆಲುವು ಹುದುಗಿದೆ ನೆಲದಿ ನೋಡಲಾರೆಯ ಗೆಳತಿ

ಹಲವು ಕಾರಣವಿಹುದು ಆಡಲಾರೆಯ ಗೆಳತಿ

 

ಛಲವು ಮೂಡಿದೆ ಮನದಿ ಬೆತ್ತಲಾಗದೆ ಹೇಳು

ಗೆಲುವು ಬಾರದೆಯಿರಲು ಕಾಡಲಾರೆಯ ಗೆಳತಿ

 

ನಲಿವು ಸುತ್ತಲು ಇಹುದು ಬೆರೆಯಲಾಗದೆ ಏಕೆ

ಜಲವು ಕಾಣದೆ ಚಲಿಸೆ ತೋಡಲಾರೆಯ ಗೆಳತಿ

 

ಒಲವು ಮೂಡದೆ ತಂಪು ಸೇರಲಾಗದೆ ನೋಡು

ಬಲವು ಕಾಣದೆ ನೀನು ಹಾಡಲಾರೆಯ ಗೆಳತಿ

 

ತಲವು ತಂಪನು ಕೊಡದೆ ಕೆಂಡವಾಯಿತೆ ಈಶ

ಕುಲವು ಹೇಳಿದ ನಡತೆ ಬೇಡಲಾರೆಯ ಗೆಳತಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್