ಗಝಲ್ ಸೊಬಗು
ಕವನ
ಒಂಬತ್ತು ತಿಂಗಳ ಹೆತ್ತು ಹೊತ್ತು
ಸಾಕಿ ಬೆಳಸ್ಯಾಳ ನನ್ನಮ್ಮ|
ನಂಬಿದವರಿಗೆ ಮೋಸ ಮಾಡಬ್ಯಾಡ
ಅಂತ ತಿಳಿಸ್ಯಾಳ ನನ್ನಮ್ಮ||
ಉಪವಾಸ ಇದ್ದು ನನ್ನನ್ನು
ತಿನಿಸಿ ದಪ್ಪ ಮಾಡ್ಯಾಳ|
ಹತ್ತು ದೇವರಿಗೆ ಹರಕಿಹೊತ್ತು
ಎತ್ತರಕ ನಿಲ್ಲಿಸ್ಯಾಳ ನನ್ನಮ್ಮ||
ಅಪ್ಪ ಕರ್ಚಿಗೆ ಕೊಟ್ಟರೊಕ್ಕ
ನನಗ ಕೊಡತಾಳ|
ಅತ್ತಾಗ ಸಮಾಧಾನ ಮಾಡಿ
ಕಣ್ಣೀರ ಒರಸ್ಯಾಳ ನನ್ನಮ್ಮ||
ಆಟ ಆಡಿ ಬಿದ್ದ ಬಂದಾಗ
ಕೊಳ್ಳಾಗ ತಾಯತ ಕಟ್ಟ್ಯಾಳ|
ಮುದ್ದುಮಾಡಿ ಮುದ್ದಿಸಿ ದೃಷ್ಟಿ
ತಗದು ಕೂಡಿಸ್ಯಾಳ ನನ್ನಮ್ಮ||
ಅಭಿನವ ಅಂದ್ರ ಪಂಚಪ್ರಾಣದಂಗ
ಸದಾ ನೆನಹು ಇಡತಾಳ|
ನೂರು ಕಷ್ಟ ಜೊತಿಗಿದ್ರು ನಗುನಗುತ
ಪ್ರೀತಿ ತೋರಿಸ್ಯಾಳ ನನ್ನಮ್ಮ||
*ಶಂಕರಾನಂದ ಹೆಬ್ಬಾಳ*
ಚಿತ್ರ್
