ಗಝಲ್, ಹನಿಗವನ ಇತ್ಯಾದಿ...

ಗಝಲ್, ಹನಿಗವನ ಇತ್ಯಾದಿ...

ಕವನ

ಗಝಲ್

ಮೌನವುಯೆಂದೂ ಸುರೆಯಾಗಿದೆ ಗೆಳತಿ

ಜೀವನವುಯೆಂದೂ ಕುರೆಯಾಗಿದೆ ಗೆಳತಿ

 

ಯೋಚನೆಯೆಂದೂ ಸೆರೆಯಾಗಿದೆ ಗೆಳತಿ

ಯಾಚನೆಯೆಂದೂ ತೆರೆಯಾಗಿದೆ ಗೆಳತಿ

 

ಸಂಚದುಯೆಂದೂ ಹರೆಯಾಗಿದೆ ಗೆಳತಿ

ಹುಚ್ಚದುಯೆಂದೂ ಕೆರೆಯಾಗಿದೆ ಗೆಳತಿ

 

ಮುತ್ತಿಗೆಯೆಂದೂ ಬರೆಯಾಗಿದೆ ಗೆಳತಿ

ಮನಸದುಯೆಂದೂ ಮರೆಯಾಗಿದೆ ಗೆಳತಿ

 

ಹೊತ್ತದುಯೆಂದೂ  ಹೊರೆಯಾಗಿದೆ ಗೆಳತಿ

ಮುತ್ತದುಯೆಂದೂ ಧರೆಯಾಗಿದೆ ಗೆಳತಿ

***

ಹೌದಲ್ವಾ

ಸವಿಗನ್ನಡದಲ್ಲಿ 

ಸಂಸ್ಕತದ ಸಂಸ್ಕೃತಿಯು

ಬೇಡವೆಂದರೆ

ಇತರೆ ಭಾಷೆಗಳ

ಬಳಸುವಿಕೆ

ಬೇಕೆ 

ಛಲವಾದಿಯೆ !

 

ಸವಿಗನ್ನಡದಲ್ಲಿ 

ಸಂಸ್ಕತದ ಸಂಸ್ಕೃತಿಯು

ಬೇಡವೆನ್ನುವವರು

ಇತರೆ ಭಾಷೆಗಳ

ಎಗ್ಗಿಲ್ಲದೇ

ಬಳಸುತ್ತಾರಲ್ಲ

ಯಾಕೆ 

ಛಲವಾದಿಯೆ !

***

ಯಾರು ಬಂದರು ಕ್ಷಣದಿ

ಯಾರು ಬಂದರು ಕ್ಷಣದಿ

ಬೇಸರಿಸದಿರುಯೆಂದು

ಯಾರು ಬರದಿರಲು ನೀ

ಕಣ್ಣೀರ ಸುರಿಸದಿರು

 

ಇರುವವರ ಜೊತೆಗಿರುತ

ಚಿಂತನೆಯ ಮಾಡುತಿರು

ಇದ್ದಾಗ ಬೀಗದೆಲೆ

ಬಿದ್ದಾಗ ಓಡದಿರು

 

ಅರಮನೆಯ ಮಹಡಿಯೊಳು

ಕುಳಿತು ಕೇಳಿದೆಯಂದು

ನೀ ಸಮವೆ ನನಗೆನುತ

ಛೇಡಿಸುತಲಂದು

 

ಸ್ವಾರ್ಥವನು ಮರೆಯುತಲೆ

ಪ್ರೀತಿಯನು ಗಳಿಸುತಿರು

ನಿಸ್ವಾರ್ಥ ಸೇವೆಯನು

ಮಾಡುತಲೆ ಬಾಳುತಿರು

 

ಗುಣವಿಹುದು ನಿನ್ನೊಳಗೆ

ಮರೆಯದೆಲೆ ತಾ ಹೊರಗೆ

ಹೊಸತನದ ಹಾದಿಯೊಳು

ನಡೆಯುತಿರು ಸುಖವಾಗೆ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ; ಇಂಟರ್ನೆಟ್ ತಾಣ

ಚಿತ್ರ್