ಗಝಲ್ ಹಾಗೂ ಕವಿತೆ

ಗಝಲ್ ಹಾಗೂ ಕವಿತೆ

ಕವನ

ಗಝಲ್ 

ನೋವಾಗುತ್ತದೆ ಮಾಡಿರದ ವಿಷಯವನು ಕೆದಕ್ಕುತ್ತ ಹೋದರೆ 

ಅಸಹ್ಯವು ಸಂಸಾರದ ನಿಷ್ಠೆಯು ಹಾಳಾಗುತ್ತ ಹೋದರೆ

 

ಜೀವನದ ದುಡಿಮೆಗೆ ಅರ್ಥವಿಲ್ಲದಿರೆ ಬದುಕುವುದು ಬೇಕೆ

ಯಾರದೋ ಬಾಳಿನ ಸ್ವಾರ್ಥಕ್ಕೆ ಮರುಗುತ್ತ ಹೋದರೆ

 

ಕೊನೆಯ ತನಕದ ಹೋರಾಟಕ್ಕು ಬೆಲೆಯು ಬಾರದಾಯಿತೆ

ಕರುಣೆಯೇ ಇಲ್ಲದ ಜನರಿಂದ ತಪ್ಪಾಗುತ್ತ ಹೋದರೆ

 

ಚಿಪ್ಪುಗಳ ಒಳಗೆ ಕುಳಿತವರು ಒಮ್ಮೆಲೆ ಹೊರಬಂದರು

ತುತ್ತುಅನ್ನಕ್ಕೆ ಕುಳಿತವನ ಮೇಲೆ ಎರಗುತ್ತ ಹೋದರೆ

 

ಈಶನೊಲವಿನ ದಯೆಯೊಂದು ಬುವಿಯಲ್ಲಿ ಉಳಿಸಿದೆ ನನ್ನನು

ಉತ್ತರ ಬರುವುದೆಂದು ಹೀಗೆಯೇ ಕಾಯುತ್ತ ಹೋದರೆ

***

ಪ್ರೀತಿ ಮತ್ತು ಸುಖ

ಒಡಲಿನೊಳಗಿನ 

ಪ್ರೇಮವರಳಿದೆ

ಪ್ರೀತಿ ಸುಖವನು ಕಂಡಿದೆ

ಚೈತ್ರ ಧಾರೆಯು

ಸುತ್ತ ಹರಡಿದೆ

ಸವಿಯು ಒಲುಮೆಯ ಉಂಡಿದೆ

 

ಕಡಲ ತೀರದ

ಅಲೆಯ ಮೋಹಕೆ

ಉಸುಕು ಬೆಚ್ಚನೆ ಮಲಗಿದೆ

ಅಲ್ಲೆ ಕುಳಿತಿಹ

ನನ್ನ ಹೃದಯವು

ನನಸ ನೋಟದಿ ಕುಳಿತಿದೆ

 

ಅಂದ ಚೆಂದದ

ಸುಂದರಾಂಗನ

ಕೈಯ ಹಿಡಿದಿಹ ಚೆಲುವೆಯೆ

ಮದುವೆ ಬಂಧನ

ಜೊತೆಗೆ ಸ್ಪಂದನ

ಬಾಳ ಮಧುವನ ಚಿಲುಮೆಯೆ

-ಹಾ ಮ ಸತೀಶ

 

ಚಿತ್ರ್