ಗಡ್ಡ ಪುರಾಣ

ಗಡ್ಡ ಪುರಾಣ

ಬರಹ

ಪ್ರಾಚೀನ ಕಾಲದಿ೦ದಲೂ ಗಡ್ಡ ವಿನ್ಯಾಸ ವಿಧವಿಧವಾಗಿದೆ. ಮೊನ್ನೆ ಮೊನ್ನೆ ತನಕ ಗಡ್ಡ-ಗಿಡ್ಡ ಬೋಳಿಸಿ ಸ್ಮಾರ್ಟ್ ಲುಕ್ ಅನ್ನುತ್ತಾ ಇದ್ದ ಹುಡುಗರು ಈಗ ಕೆನ್ನೆ, ಗಲ್ಲದ ಮೇಲೆ ’ಕೊ೦ಚ ಗಡ್ಡ’ದ ಕೃಷಿ ನಡೆಸುತ್ತಿದ್ದಾರೆ! ಗಲ್ಲದ ಮೇಲೆ ವಿಶಿಷ್ಟ ವಿನ್ಯಾಸದ ಗಡ್ಡ, ತುಟಿಯ ಕೆಳಗೆ ಗೋಡ೦ಬಿ ಗಾತ್ರದ ತ್ರಿಕೋನಾಕೃತಿಯ ಗಡ್ಡ, ಅವರ್ ಗ್ಲಾಸ್ ಮಾದರಿಯ ಗಡ್ಡ, ಮುಖದ ಪರಿಧಿಗೆ ಗೆರೆ ಎಳೆದ೦ತಿರುವ ಗಡ್ಡ, ಅಡ್ಡಾ ದಿಡ್ಡಿಯಾಗಿ ಕೂದಲು ಬೆಳೆದು ಹುಲ್ಲುಗಾವಲಿನ೦ತಿರುವ ಗಡ್ಡ - ಹೀಗೆ ಗಡ್ಡಗಳಲ್ಲಿ ಹಲವು ವಿಧ.

’ಫ್ರೆ೦ಚ್ ಗಡ್ಡ’ ಬುದ್ಧಿಜೀವಿಗಳು, ವಿಜ್ಞಾನಿಗಳ ಸ್ವತ್ತು ಎ೦ಬ೦ತೆ ಭಾವಿಸುತ್ತಿದ್ದ ಕಾಲವೊ೦ದಿತ್ತು. ಆದರೆ ಈಗ ಹಾಗಿಲ್ಲ ಬಿಡಿ, ಫ್ರೆ೦ಚ್ ಗಡ್ಡ ತನ್ನ ಬುದ್ಧಿವ೦ತರ ಸ೦ಗದ ಜೊತೆಗೆ ಸಾಮಾನ್ಯರ ಮನ್ನಣೆಯನ್ನೂ, ವ್ಯಾಪಕ ಬಳಕೆಯನ್ನೂ ಪಡೆದಿದೆ! ಮಹಾಭಾರತ, ರಾಮಾಯಣ ಕಾಲದಲ್ಲಿ ಜನರು ಗಡ್ಡವನ್ನು ಬಿಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ರಾಮಾಯಣ, ಮಹಾಭಾರತದ ದೂರದರ್ಶನದ ಅವತರಣಿಕೆಯಲ್ಲಿ ಬರುವ ರಾಮ, ಲಕ್ಷ್ಮಣ, ಪ೦ಚ ಪಾ೦ಡವರು, ಕೌರವರು ಗಡ್ಡರಹಿತ!

ಮು೦ದೆ ಓದಿ...