ಗಡ್ಡ ಮೀಸೆಪುರಾಣ
ಇದೇನಪ್ಪಾ ಇದಕ್ಕೂ ಒಂದು ಚರ್ಚೆಬೇಕಾ ಅಂತ ಗಡ್ಡ ಕೆರೆದುಕೊಳ್ಳಬೇಡಿ.. :-)
ಕೆಲದಿನಗಳಹಿಂದೆ ಉತ್ತರಭಾರತದವರೊಬ್ಬರೊಂದಿಗೆ ಹರಟುತ್ತಿದ್ದೆ. ನೀವು ಸೌತ್ ಲೋಗ್ ಯಾಕೆ ಮೂಂಚ್ ರಕ್ತೇ ಹೋ ಅಂತ ಕೇಳುತ್ತಿದ್ದೆ. ಅಂದ್ರೆ ಇಲ್ಲಿ ದಕ್ಷಿಣದಲ್ಲಿ ಸುಮಾರು ೧೦ ರಲ್ಲಿ ೮ ಜನ ಮೀಸೆ ಬಿಡುತ್ತೀರಿ. ಅಲ್ಲಿ ಉತ್ತರದಲ್ಲಿ ೧೦ ರಲ್ಲಿ ೮ ಜನ ಮೀಸೆ ಬಿಡುವುದಿಲ್ಲ ಅಂತ ಹೇಳುತ್ತಿದ್ದ. ಹೌದು ನಿಮ್ಮಲ್ಲಿ ಏಕೆ ಹೀಗೆ ಏನಾದರೂ ಪದ್ಧತಿಯೇ ಅಂದೆ.
ಅಲ್ಲವಂತೆ. ಅಲ್ಲಿ ಜಾಗತೀಕರಣ ಪ್ರಭಾವದಿಂದಾಗಿ, ಚೀನೀಯರು, ಪಾಶ್ಚಿಮಾತ್ಯರ ಪ್ರಭಾವದಿಂದಾಗಿ ಅದೇ ಸಂಸ್ಕೃತಿಯನ್ನು ಅನುಕರಿಸುವಂತಾಗಿ ಹಾಗಾಗಿದೆ ಅಂದ. ಇನ್ನು ನನ್ನ ತಮಿಳು ಮಿತ್ರನೊಬ್ಬನೂ ಹೀಗೆಯೇ ಏನೋ ಹೇಳುತ್ತಿದ್ದ. ಕೆಲವು ಪಂಗಡಗಳಲ್ಲಿ ಗಡ್ಡ ಮೀಸೆ ಬಿಡುವುದು, ತಲೆಕೂದಲು ಬಿಡುವುದು ಇತ್ಯಾದಿ ಅವರ ಪದ್ಧತಿಗಳು ಎಂದು ಹೇಳುತ್ತಿದ್ದ. ಇನ್ನು ಯಾವುದೋ ಶ್ಲೋಕದಲ್ಲೋ ಏನೋ ಉಗುರು, ಗಡ್ಡ, ಮೀಸೆಗಳು ಮಲಕ್ಕೆ ಸಮಾನ, ಅವನ್ನು ಆಗಾಗ ತೆಗೆದು ಹಾಕುತ್ತಿರಬೇಕು ಎಂದು ಓದಿದ್ದೆ. ಇನ್ನು ಕೂದಲನ್ನೂ ಸಹ ಒಂದಳತೆಗೆ ಮಿಗಿಲಾಗಿ ಬೆಳೆಸಬಾರದಂತೆ. ಅದಕ್ಕೇ ಹೇರ್ ಕಟಿಂಗ್, ಶೇವಿಂಗ್ ಇವುಗಳಿಗೆ ’ ಆಯುಶ್ಕರ್ಮ’ ಎಂದು ಹೇಳುತ್ತಿದ್ದರು. ಭಾರತದಲ್ಲಿ ಅದರಲ್ಲೂ ನಗರ ಪ್ರದೇಶಗಳಲ್ಲಿ ಈ ಮುಖದ ಮೇಲಿನ ಕೂದಲನ್ನು maintain ಮಾಡುವುದು ಕಷ್ಟ. ಆಗ್ಗಾಗ್ಗೆ ಒಳಗೆ ಧೂಳು ಸೇರಿಕೊಂಡು ಕಡಿತ ಶುರುವಾಗುತ್ತಿರುತ್ತದೆ
:-)
ಇದೆಲ್ಲದರ ಬಗ್ಗೆ ನಿಮ್ಮಭಿಪ್ರಾಯ ಏನು?
Comments
ಉ: ಗಡ್ಡ ಮೀಸೆಪುರಾಣ
In reply to ಉ: ಗಡ್ಡ ಮೀಸೆಪುರಾಣ by ASHOKKUMAR
ಉ: ಗಡ್ಡ ಮೀಸೆಪುರಾಣ