ಗಣಪತಿ ವಿಸರ್ಜನೆ ನಾಳೆ !

ಗಣಪತಿ ವಿಸರ್ಜನೆ ನಾಳೆ !

ಬರಹ

"ಗಣಪತಿ ಬಂದ, ಕಾಯ್ಕಡುಬು ತಿಂದ", ಎಂದು ಸಡಗರಿಸುವ ಹೊತ್ತಿಗೆ, ಆಗಲೇ ವಿಘ್ನೇಶ್ವರನಿಗೆ ವಿದಾಯ ಸಲ್ಲಿಸುವ ಸಮಯ ಹತ್ತಿರವಾಗುತ್ತಿದೆ ! ನಾವು ಈಗ ಹೇಳಬೇಕಾದದ್ದು ಮುಂದಿನ ವರ್ಷ ಬೇಗ ಬಂದು ನಮ್ಮನ್ನು ಹರಸು ಎಂದು ಮಾತ್ರ !

ಮಹಾರಾಷ್ಟ್ರದ ವಿಶೇಷತೆ ಎಲ್ಲರಿಗು ತಿಳಿದದ್ದೆ ! ಅದರ ಸಾರ್ವಜನಿಕ ಲಕ್ಷಣ. ಎಲ್ಲರೂ ಒಟ್ಟಿಗೆ ಕೂಡಿ ಪೂಜೆ ಮಾಡೊಣ, ಕೂಡಿ ನಲಿಯೋಣ ಎಂಬ ಸಿದ್ಧಾಂತ !

ಈಗ ಮುಂಬೈ ನಲ್ಲಿ ಒಟ್ಟು ೮,೦೦೦ ಸಾರ್ವಜನಿಕ ಗಣೇಶೊತ್ಸವ ಮಂಡಳ ಗಳಿವೆ.ಅದರಲ್ಲಿ ೫೦% ಮಾತ್ರ 'ಚ್ಯಾರಿಟೀ ಕಮೀಶನರ್' ಬಳಿ ನೊಂದಾಯಿಸಿರುವುದು. ಅವರಿಗೆ ಐ.ಟಿ.ಕಾನುನು ರೀತ್ಯ ಕೆಲವು ರಿಯಾಯಿತಿಗಳಿವೆ. ( ಸೆಕ್ಷನ್ ೧೦, ೧೧, ೧೨, ೧೩ ರ ಪ್ರಕಾರ )ಬೇರೆಯವರು ಈ ರಿಯಾಯಿತಿಗೆ ಅರ್ಹರಲ್ಲ.ಮುಂಬೈನ ಕೆಲವು ಮುಖ್ಯ ಸಾರ್ವಜನಿಕ ಗಣಪತಿ ಮಂಡಳಿ ಗಳ ಬಗ್ಗೆ ಸ್ವಲ್ಪ ವಿವರ ಹೀಗಿದೆ.

ಸಕಲ ವಿಧವಾದ ಆಡಂಬರ ಬೆಳಕಿನ ವೈಭವೀಕರಣಗಳಿಂದ ಕೂಡಿದ ಗಣಪತಿಗಳಿಗೇನೂ ಕೊರತೆಯಿಲ್ಲ ! ಆದರೆ ಲೋಕಮಾನ್ಯ ಬಾಲಗಂಗಾಧರ ತಿಳಕರ ಹಸ್ತದಿಂದ ಬೆಳಕು ಕಂಡ ಅತಿ ಹಳೆಯ (೧೧೩ ವರ್ಷಗಳ ಹಿಂದಿನ )ಮಂಡಳಿ ಎಂದರೆ, ಮುಂಬೈನ ಕೇಶವ್ ಜೀ ನಾಯ್ಕ್ ಚಾಳ್, ಗಿರ್ ಗಾವ್ ನ ಗಣೇಶೊತ್ಸವ ಮಂಡಳಿಯದು ! ಇಲ್ಲಿ ಭಕ್ತಿಯೇ ಪ್ರಧಾನ. ಕೇವಲ ೧೫೦ ಮನೆಯವರು ತಲಾ ೬೧ ರೂ. ದೇಣಿಗೆ ಕೊಡುತ್ತಾರೆ. ಸಂಗ್ರಹಿಸಿದ ಹಣ ಕೇವಲ ೧.೫ ಲಕ್ಷ ರೂಗಳು. ಇದರ ಟ್ರಸ್ಟಿನ ವಿನೊದ್ ಸತ್ಪುತೆ ಹೇಳುವಂತೆ, "ಇಲ್ಲಿ ಕೃತಕ ಶೃಂಗಾರ ವಿಲ್ಲ.ಭಕ್ತರ ದೊಡ್ಡ ಕ್ಯೂ ಗಳು ಇಲ್ಲ". ಈ ವರ್ಷ "ತಿಳಕರ ೧೫೦ ನೆ ವರ್ಧಂತ್ಯೋತ್ಸವವಿದೆ" ! ಅದರ ನಿಮಿತ್ತ, ಗಣೇಶೊತ್ಸವದ ಕುರಿತಂತೆ ಒಂದು ಪುಸ್ತಕದ ಬಿಡುಗಡೆಯೂ ಇದೆ. ಮಂತ್ರಿಗಳು, ಗಣ್ಯರು, ಸದ್ದಿಲ್ಲದೆ ಇಲ್ಲಿಗೆ ಬಂದು ಗಣೇಶನಿಗೆ ವಂದಿಸಿ ಆಶೀರ್ವಾದ ಪಡೆದು ಹೋಗುತ್ತಾರೆ. ನಗರದ ಇನ್ನೂ ಹಲವು ಗಣಪತಿಗಳ ಬಗ್ಗೆ ತಿಳಿಯೋಣ.

೧. ಲಾಲ್ ಬಾಗ್ ಚಾ ರಾಜಾ :

ಬೇರೆ ಗಣಪತಿಗಳಲ್ಲಿ 'ಲಾಲ್ ಬಾಗ್ ಚಾ ರಾಜಾ'ತನ್ನ ಆಕರ್ಷಣೆಗೆ ಹೆಸರುವಾಸಿ ! ೨೫ ಆಡಿ
ಎತ್ತರ ವಿರುವ ಇದರ ಬಜಟ್ ಸುಮಾರು ೧.೫ ಕೋಟಿಯದು. ಪ್ರತಿವ‍ರ್ಷವೂ ಸುಮಾರು ೧೫
ಪಟ್ಟು ಹೆಚ್ಚು ಜನ ಬರುತ್ತಾರೆ. ೨೦ ಕೆಜಿ ಬೆಳ್ಳಿಯ 'ಪಾದ'ವನ್ನು ಮಾಡಿಸಿದ್ದಾರೆ. ಪ್ರತಿವರ್ಷ
ಗಣಪತಿ ಹಬ್ಬದ ಸಮಯದಲ್ಲಿ ಸುಮಾರು ೧೫ ಲಕ್ಷ ಜನ ಭಕ್ತರು ಇಲ್ಲಿಗೆ ಬರುತ್ತಾರೆ.

೨. ಜಿ ಎಸ್.ಬಿ. ಸಾರ್ವಜನಿಕ ಗಣಪತಿ ಮಂಡಳಿ : ಈ ಗಣಪತಿಗೆ ಅದರದೇ ಆದ ಬೆಳ್ಳಿ
ಬಂಗಾರಗಳ ಒಡವೆ ಸೆಟ್ ಗಳಿವೆ. ೫೦ ವರ್ಷಗಳ ಚರಿತ್ರ್ಯೆ ಇರುವ ಈ ಗಣಪತಿಗೆ ೧೦ ಅಡಿ
ಉದ್ದದ ಬಂಗಾರದ ಹಾರವಿದೆ ! ಆರತಿ, ಪೂಜೆಗಳು ವಿಜೃಂಭಣೆ ಇಂದ ನಡೆಯುತ್ತವೆ.

೩. ಗಣೇಶ್ ಗಲ್ಲಿ ಮಂಡಳಿ : ೭೫ ವರ್ಷಗಳ ಇತಿಹಾಸವಿರುವ ಈ ಗಣಪನ ಮಹಿಮೆ ಹೆಚ್ಚಾಗಿದೆ.

೪. ತುಳಸಿವಾಡಿ ತಾರ್ದೇವ್ ಗಣಪತಿ ಮಂಡಳಿ : ಸುಮಾರು ೮ ವರ್ಷಗಳಿಂದ ಉತ್ಸವ
ನಡೆಯುತ್ತಿದೆ. ೨೧ ಆಡಿ ಎತ್ತರ ದ ವಿಗ್ರಹವನ್ನು ಖ್ಯಾತ ವಿಜಯ್ ಖಟಾವ್, ನಿರ್ಮಿಸುತ್ತಾರೆ.

೫. ಕಾಲಾಚೌಕಿ ಮಂಡಳಿ : ೫೦ ವರ್ಷಗಳಿಂದ ಪೂಜಿಸಲ್ಪಡುತ್ತಿರುವ ಈ ಗಣೇಶ ಗಣೇಶಮಂದಿರ
ಫುಳೆ, ರತ್ನಗಿರಿಯನ್ನು ಹೋಲುವ ಈ ಪ್ರತಿಮೆ ಬಹು ಜನರ ಮನ್ನಣೆಗೆ ಪಾತ್ರವಾಗಿದೆ. ಹೀಗೆ
ಬಹಳ ಗಣೇಶ ಮಂಡಲಿಗಳು ವಿಜೃಂಭಣೆಯಿಂದ ಪೂಜೆ ಪುನಸ್ಕಾರಗಳನ್ನು ೧೦ ದಿನ ಗಳಿಂದ
ಮಾಡಿಕೊಂಡು ಬಂದಿವೆ.

ನಾಳೆ ಬುಧವಾರ, ಸೆಪ್ಟೆಂಬರ್, ೬ ನೆ ತಾರೀಖು, ಮುಂಬೈನ ಎಲ್ಲಾ ಗಣಪತಿಗಳನ್ನು ಪಾರಂಗತವಾಗಿ ಪೂಜೆ, ಅರ್ಚನೆ, ಮಂಗಳಾರತಿ, ಭಜನೆ, ನೃತ್ಯ ಗಳಿಂದ ದಾದರ್ ಚೌಪಾತಿ, ಮತ್ತಿರರ ಜಾಗಗಳಲ್ಲಿ ವಿಧಿಪೂರ್ವಕವಾಗಿ ವಿಸರ್ಜನೆ ಮಾಡಲಾಗುತ್ತದೆ. ನಾಳೆ ಬಹುಶಃ ಇನ್ನೇನೂ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಲವು ಕಛೇರಿಗಳಿಗೆ ರಜಾ ಘೋಶಿಸುತ್ತಾರೆ.ಗಣಪತಿ ಯನ್ನು ಬೀಳ್ಕೊಡಿ, ಅವನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ. ನಮ್ಮೆಲ್ಲರ ಆಸೆ ಆಕಾಂಕ್ಷೆಗಳು "ಗಣಪತಿ ಬಪ್ಪನ" ದಯೆಯಿಂದ ನೆರವೇರಲಿ.

" ಗಣಪತಿ ಬಪ್ಪ ಮೋರ್ಯಾ, ಪುಡ್ಚಾ ವರ್ಷೀ ಲೌಕರ್ ಯಾ" !!