ಗಣಪನ ಗಂಡಾಂತರಗಳು ಅನೇಕ

ಗಣಪನ ಗಂಡಾಂತರಗಳು ಅನೇಕ

ಬರಹ

ಗಣೇಶ ಚತುರ್ಥಿ ಸಂಬ್ರಮ ಸಡಗರ ಅಚರಣೆಯ ಮೂಲಕ ರಾಜ್ಯಾದ್ಯಂತ ನಡೆದಿದೆ. ವಿವಿಧ ಬಗೆ, ವಿವಿಧ ನಮೂನೆಯ ಗಣೇಶನ ಪ್ರತಿಷ್ಠಾಪಿಸಲಾಗಿದೆ. ಪ್ರತಿಷ್ಠಾಪಿಸಲ್ಪಟ್ಟಿರುವ ಅನೇಕ ವಿಗ್ರಹಗಳು ರಸ್ತೆ, ಬೀದಿ ಎನ್ನದೆ ಎಲ್ಲಾ ಕಡೆಯಲ್ಲೂ ಆಕ್ರಮಿಸಿದೆ. ಆದರೆ ಈ ರೀತಿಯ ಮೂರ್ತಿಯನ್ನು ಕೂರಿಸುವುದಕ್ಕೆ ಅನುಸರಿಸಿರುವ ರೀತಿ ನೀತಿ ಮಾತ್ರ ಅನೇಕ. ಇಲ್ಲಿ ಸಂಯಮವಾಗಲಿ ಶಿಸ್ತು ಮಾತ್ರ ನಾಪತ್ತೆಯಾಗಿದೆ. ಅನೇಕ ಸರ್ಕಾರದ ಆದೇಶಗಳ ಗೊತ್ತಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ

ರಾಯಚೂರಿನಲ್ಲಿ ಗಣೇಶನ ವಿಚಾರದಲ್ಲಿ ಗಲಭೆ ನಡೆದಿದೆ. ಚಿತ್ರದುರ್ಗದಲ್ಲಿ ಮೂರ್ತಿಗಳು ಸಿಗಲಿಲ್ಲ ಎಂಬ ಕಾರಣಕ್ಕೆ ಗಲಾಟೆ ನಡೆದಿದೆ. ಇನ್ನು ಬೆಂಗಳೂರಿನಂತಹ ನಗರದಲ್ಲಿ ಇದರ ರೂಪುಗಳು ಅನೇಕ. ಅದಕ್ಕಾಗಿ ಕೊಲೆಗಳಾಗಿವೆ. ನೆತ್ತರು ನೀರಿನಂತೆ ನಡೆದಿದೆ. ಮನಗಳ ನಡುವೆ ವೈಮನಸ್ಸುಗಳು ಮೂಡಿವೆ.

ಇನ್ನು ರೋಲ್ ಕಾಲ್ಗಳ ವಿಚಾರದಲ್ಲಿ ಅದೆಷ್ಟೋ ಸಿನಿಮೀಯ ಕತೆ ನಡಿದಿದೆ. ಹಣ ವಸೂಲಾತಿಗೆ ನಡೆದಿರುವ ಪ್ರಭಾವ, ಪ್ರಲೋಭನೆಯಿಂದಾಗಿಯೇ ಪ್ರಕ್ಷುಬ್ದ ವಾತಾವರಣ ಅನೇಕ ಕಡೆ ನಿರ್ಮಾಣವಾಗಿದೆ. ಇನ್ನು ಒಂದೇ ಊರಿನಲ್ಲಿ ನಾಲ್ಕೆಂಟು ಗಣಪನ ಮೂರ್ತಿಗಳು ಆಸೀನವಾಗಿವೆ. ಈ ಗಣಪನ ವಿಘ್ನ ನಿವಾರಕನಾಗದೇ ವಿಘ್ನ ತಂದೊಡ್ಡಿದ್ದಾನೆ. ಒಂದು ಬೀದಿಯಲ್ಲಿ ಮೂರ್‍ನಾಲ್ಕು ಗಣೇಶನಗಳನ್ನು ಕೂರಿಸುವ ವಿಚಾರವಾಗಿ, ಬೀದಿಗಳಲ್ಲಿ ಹಣ ವಸೂಲಾತಿಯ ವಿಚಾರವಾಗಿ ಅಥವಾ ಮೆರವಣಿಗೆಯ ಸಂದರ್ಭದಲ್ಲಾಗಲಿ ... ಹೀಗೆ ಅನೆಕ ವಿಚಾರಗಳು ಮಣ್ಣಿನ ಗಣೇಶನ ಎದುರು ಗಲಾಟೆಗೆ ಕಾರಣವಾಗಿದೆ.

ಇನ್ನು ಒಂದೇ ಕುಲಬಾಂಧವರು, ಸಹಿಕರು, ಚಿಕ್ಕ ದೊಡ್ಡಪ್ಪ ಮನೆಗಳಲ್ಲಿ ಕುಳ್ಳರಿಸುವ ಗಣೇಶನು ಏನು ಸುಮ್ಮನಿಲ್ಲ. ಅವನು ಪ್ರತಾಪ ಅಲ್ಲೂ ಮುಂದುವರೆದಿದೆ. ಏನು ಅವನ ಮನೆಗೆ ಹೋಗೋದು ನಾವು ಒಂದು ಕೈ ನೋಡೋಣ. ಅದೆಷ್ಟು ಖರ್ಚು ಆಗುತ್ತೋ ನೋಡೆ ಬಿಡೋಣ. ಕಳೆದ ಸಾರಿ ನಮ್ಮ ಜೊತೆ ಇದ್ದವರು ಈಗ ನಮ್ಮಿಂದ ದೂರವಾಗಿ ಗಣೇಶನನ್ನು ಕುಳ್ಳರಿಸೋದೇನು..? ನಾವೇನು ಕಡಿಮೆ...ಇಂತಹ ಅನೇಕ ವಿಚಾರಗಳು ಅನೇಕ ಬಾರಿ ರಕ್ತ ಸಂಬಂದಿಗಳನ್ನು ಕಡಿದು ಹಾಕಿದೆ.

ಇನ್ನು ಇದರಿಂದ ಅನುಕೂಲವಾದರೂ ಯಾರಿಗಾರಿಗೆ ಗೊತ್ತಾ.. ನಿಜವಾಗಲು ಹಲಗೆ ಬಡಿಯುವ ತಂಡಗಳು, ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಮವಸ್ತ್ರ ಧರಿಸಿರುವ ಅರೆ ನವೀನ ವಾದ್ಯಗೋಷ್ಠಿ. ಇಲ್ಲಾ.. ಆರ್ಕೆಸ್ಟ್ರಾ ತಂಡಗಳು ಹಬ್ಬದ ಆಚರಣೆಯಿಂದ ಸ್ವಲ್ಪ ನಿಟ್ಟಿಸುರು ಬಿಡಬಹುದು. ಇದರ ಜೊತೆಗೆ ಹಾಲು ಇದ್ದಾಗ ಹಬ್ಬ ಮಾಡಿಕೋ ಎಂಬಂತೆ, ಹೂ ಕಟ್ಟುವವ ಹೂ ಮಾರುವ ಮಹಿಳೆಯರು ಸ್ವಲ್ಪ ಮಟ್ಟಿಗೆ ನಿರಾಳ ಮನಸ್ಸಿನಿಂದ ಉಸಿರಾಡಬಹುದು. ಆದರೂ ಇಲ್ಲೂ ಏನು ಕಡಿಮೆಯಿಲ್ಲ. ಇಲ್ಲಿ ಕೂಡ ಅವರದ್ದೇ ಆದ ಸ್ವಂತ ಸಮಸ್ಯೆಗಳು ಭುಗಿಲೇಳುತ್ತಾವೆ.

ಒಟ್ಟಿನಲ್ಲಿ ನನ್ನ ಉದ್ದೇಶ ಮಾತ್ರ ಒಂದೇ.. ಹಬ್ಬ ಹರಿದಿನಗಳು ಸಮಾಜ, ಊರಿನ ಜನತೆ, ಕುಟುಂಬ, ಜನರು ಒಂದೆರಡು ಇರುಳು ಹಸನ್ಮುಖಿಯಾಗಿರಲಿ. ತಮ್ಮ ತಾಪತ್ರಯಗಳು ಕಳೆದು ದಣಿವಾರಿಸಿಕೊಳ್ಳಲು ಆಚರಿಸಲು, ನಾವೇ ನಿರ್ಮಾಣ ಮಾಡಿಕೊಂಡಿರುವ ಹಬ್ಬದ ಹೆಸರಿನ ದಿನಗಳು. ಆದರೆ ಅವುಗಳು ಇಂದು ತಮ್ಮ ಮೂಲ ಧ್ಯೇಯಗಳನ್ನು ಮರೆತಿವೆ. ಅಲ್ಲಲ್ಲಾ ನಾವೇ ಮರೆಯಲಿಕೆ ಒತ್ತಡ ತಂದಿದ್ದೀವೆ ಅಂದರೆ ಸರಿಯೇನೋ.. ಅದಕ್ಕೆಲ್ಲಾ ನಮ್ಮ ಜನತೆಯ ಸ್ವ ಪ್ರತಿಷ್ಠೆ ಹಾಗೂ ಸ್ವಾಭಿಮಾನ ಕೂಡ ಒಂದಾಗಿದೆ. ಇದರೊಟ್ಟಿಗೆ ಸ್ವಲ್ಪ ಹಣಕಾಸು ಹಾಗೂ ಒಣ ಪ್ರತಿಷ್ಠೆ ಕೆಲಸ ಮಾಡುತ್ತಿದೆ.

ಒಟ್ಟಿನಲ್ಲಿ ತಿಲಕರು 1980 ರ ದಶಕದಲ್ಲಿ ಸ್ವಾತಂತ ಸಂಗ್ರಾಮದಲ್ಲಿ ಯಶಸ್ಸು ಸಾಧಿಸುವ ಹಂಬಲದ ದಿನಗಳಲ್ಲಿ ಆಚರಣೆ ತಂದ ಹಬ್ಬವಿದು. ಆ ಸಮಯ ಬ್ರಿಟೀಷರು ನಮ್ಮನಾಳಿ ಒಗ್ಗೂಡಲು ಬಿಡದ ಸಮಯ. ಆ ದಿನಗಳಲ್ಲಿ ಜನತೆಯಲ್ಲಿ ಉತ್ಸಾಹ ಹಾಗೂ ಸಂವಹನದ ಕೊರತೆ ನೀಗಿಸಲು ತಿಲಕರು ಗಣೇಶ ಹಾಗೂ ಶಿವಾಜಿ ಜನ್ಮ ದಿನಾಚರಣೆ ಆರಂಭಿಸಿದರು. ಇದರಿಂದಾಗಿ ಸ್ವಾತಂತ್ರ ಸಂಗ್ರಾಮದ ಕಿಚ್ಚು ಹತ್ತಿಸಿ ಯಶಸ್ಸು ಆದ ಗಣೇಶನ ಆಚರಣೆ ಇದೀಗ ಬೇರೆ ರೀತಿಯ ಕಿಚ್ಚನ್ನು ಒತ್ತಿಸುತ್ತಿರುವುದು ಖೇದಕರ ಸಂಗತಿಯಾಗಿದೆ. ಅಲ್ಲಿಂದೀಚೆಗೆ ಸಮಾಜಕ್ಕೆ ಹತ್ತಿರವಾದ ಹಬ್ಬ ಇಂದು ಮಾತ್ರ ಗೌಣವಾಗಿದೆ.

ಒಟ್ಟಿನಲ್ಲಿ ಗಣೇಸನನ್ನು ವಿಗ್ನ ನಿವಾರಕನೋ.. ವಿಗ್ನ ಸೃಷ್ಠಸುವನೋ ನೀವೆ ಹೇಳಿ...

-ಬಾಲರಾಜ್ ಡಿ.ಕೆ