ಗಣಪ ಶಾಲೆಗೆ ಸೇರಿದ್ದು
ಬರಹ
ಪುಟ್ಟ ಗಣಪ
ಶಾಲೆಗೆ ಸೇರಿದ
ಪಾಠ ಕಲಿಯಕ್ಕೆ.
ಅ ಆ ಇ ಈ
ಎ ಬಿ ಸಿ ಡಿ
ಲೆಕ್ಕ ಬಿಡಿಸಕ್ಕೆ.
ದೊಡ್ಡ ಸೈಜಿನ
ಯೂನಿಫಾರಮ್
ಎಲ್ಲೂ ಸಿಗಲಿಲ್ಲ.
ಅಪ್ಪನ ಬೆಲ್ಟೂ
ಇವನ ಸೊಂಟಕೆ
ಸಾಕಾಗೋದಿಲ್ಲ.
ಅಂಗ್ಡಿಗೆ ಹೋಗಿ
ಈಶ್ವರ ತಂದನು
ದೊಡ್ಡ ಥಾನು ಬಟ್ಟೆ.
ಪಾರ್ವತಿ ಕಷ್ಟದಿ
ಹೊಲಿದುಕೊಟ್ಟಳು
ಅಂಗಿ ಚಡ್ಡಿ ಬಟ್ಟೆ.
ಇವನ ಸೊಂಡಿಲೇ
ಟೈ ಥರ ಇಹುದು
ಬೇರೆ ಏನೂ ಬೇಡ.
ಸೆಕೆಯಲಿ ಬೆವರಿ
ಉಸಿರುಕಟ್ಟುವ
ಗೋಳು ಸಂಕಟ ಬೇಡ.
ಗಣಪನ ಹೊತ್ತ
ಇಲಿಮರಿ ಸಾಗಿತು
ಮೆಲ್ಲನೆ ಶಾಲೆಗೆ.
ಸ್ಕೂಲಿನ ಬ್ಯಾಗನು
ಬೆನ್ನಿಗೆ ಹೇರಲು
ಕುಸಿಯಿತು ಭೂಮಿಗೆ.
ಮೆಲ್ಲನೆ ಮೆಲ್ಲನೆ
ಗಣಪ ಬಂದ
ನಮ್ಮಯ ಶಾಲೆಗೆ.
ಸೊಂಟದ ಹಾವಿನ
ಬೆಲ್ಟಿಗೆ ಹೆದರಿ
ಹಾರಿದರು ಮಿಸ್, ಹೊರಗೆ !!!