ಗಣರಾಜ್ಯ...
ಕವನ
ಗಣಗಣ ಗಣ ಸಂಕರ್ಷಣ
ರಾಜ್ಯದ ಹೆಸರಿಗೆ ನವಚೈತನ್ಯ
ಭಾಷೆ ಗಡಿಯ ಸಂಯೋಜನ
ಭಾರತದೇಳ್ಗೆಗೆ ನವ ಚಿಂತನ.
ಉತ್ತರ-ದಕ್ಷಿಣ,ಪೂರ್ವ-ಪಶ್ಚಿಮ
ದಿಕ್ಕು ದಿಕ್ಕಿನಲಿ ಪ್ರಾಂತ್ಯದ ಉಗಮ
ಭಾಷೆಯು ಹೊನ್ನು ಮಾತದು ಚೆನ್ನು
ಕಾಶ್ಮೀರ ಕನ್ಯಾಕುಮಾರಿಯು ಹೊನ್ನು.
ಸಂಸ್ಕೃತಿ ಸಂಸ್ಕಾರ ಸಾರಿದ ಭಕ್ತಿ
ಮಾರುತನಾಟದ ಚುಂಬಕ ಶಕ್ತಿ
ಸಾಹಿತ್ಯ-ಸಂಗೀತ ಕಲೆ ನೂರಾರು
ರಾಜ್ಯ ರಾಜ್ಯದಲು ಹರಡಿದೆ ಬೇರು.
ಉಡುಗೆ ತೊಡುಗೆಯದು ನವನಾವೀನ್ಯ
ಪಂಚಭೂತದಲ್ಲಡಗಿದ ಚೈತನ್ಯ
ಜ್ಞಾನ- ಸಿದ್ಧಿಸಾಧನೆಗಿದೆ ನಂಟು
ಭಾವ ಬಂಧನವದು ನೂರೆಂಟು.
ಇಪ್ಪೊತ್ತೊಂಬತ್ತು ರಾಜ್ಯವು ನೂರ್ಹತ್ತರಲಿ
ಹೊಸಹೊಸ ಅರಿವಿನ ಅಧ್ಯಾಯದಲಿ
ಗಡಿ, ಭಾಷೆ ಮತಕೆ ಮೀರಿದ ಸಂಬಂಧ
" ಭಾರತವದು" ಬೆಸೆದಿದೆ ಅನುಬಂಧ.
-ವೀಣಾ ಕೃಷ್ಣಮೂರ್ತಿ, ದಾವಣಗೆರೆ.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್