ಗಣಿ-ತ ಪ್ರಶ್ನೆಗಳು
ಬರಹ
ಬೇಕಾ’ಬಿಟ್ಟಿ’ಯಾಗಿ ನಾಡಿನ ಭೂಮಿಯನ್ನು ಗಣಿಗಾರಿಕೆಗೆ ನೀಡುತ್ತಿದೆ ನಮ್ಮ ಬಿಜೆಪಿ ಸರ್ಕಾರ.
ಈ ನಾಡಿನ ಭೂಸಂಪತ್ತನ್ನು ಬೆರಳೆಣಿಕೆಯಷ್ಟು ಮಂದಿ ತಮಗೆ ಬೇಕಾದ ಕೆಲವರ ಭೋಗಕ್ಕೆ ನೀಡುವುದನ್ನು ನೋಡುತ್ತ ನಾಡಿನ ಪ್ರಜೆಗಳು ಅಸಹಾಯಕರಾಗಿ ಕುಳಿತುಕೊಳ್ಳಬೇಕೆಂದರೆ ಇದೆಂಥ ಪ್ರಜಾಪ್ರಭುತ್ವ?!
ತಮ್ಮ ಪಕ್ಷದವರನ್ನು ಬಿಟ್ಟು ಉಳಿದವರೆಲ್ಲ ದೇಶದ್ರೋಹಿಗಳೆಂಬಂತೆ ಬಿಂಬಿಸುತ್ತ ಬಂದಿರುವ ಬಿಜೆಪಿ ಪಕ್ಷದ್ದು ಇದೆಂಥ ದೇಶಹಿತದ ಕೆಲಸ?!
6000 ರೂಪಾಯಿ ಮಾರಾಟ ಬೆಲೆಯ ಒಂದು ಮೆಟ್ರಿಕ್ ಟನ್ ಕಬ್ಬಿಣದದಿರಿಗೆ ಕೇವಲ 27 ರೂಪಾಯಿ ರಾಜಧನ ವಸೂಲು ಮಾಡುವುದು ಯಾವ ನ್ಯಾಯ?
ಆ 27 ರೂಪಾಯಿಗೆ ಬಾಯಿಬಾಯಿ ಬಿಡುವಷ್ಟು ಪಾಪರೆದ್ದುಹೋಗಿದೆಯೇ ನಮ್ಮ ರಾಜ್ಯ ಸರ್ಕಾರ?